ಹುಂಟಿಂಗ್ಟನ್ (ಅಮೆರಿಕ): ಕ್ಯಾಲಿಫೋರ್ನಿಯಾದ ದಕ್ಷಿಣ ಭಾಗದ ಪ್ರಸಿದ್ಧ ಹುಂಟಿಗ್ಟನ್ ಕಡಲ ತೀರದಲ್ಲಿ ಭಾರಿ ಪ್ರಮಾಣದ ತೈಲ ಸೋರಿಕೆಯಿಂದ ಕಡಲ ತೀರ ಕಲುಷಿತಗೊಂಡಿದ್ದು, ಸಾವಿರಾರು ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿವೆ.

ಮೂರು ದಶಕಗಳ ಬಳಿಕ ಈ ಭಾಗದಲ್ಲಿ ಸಂಭವಿಸಿರುವ ದೊಡ್ಡ ತೈಲ ಸೋರಿಕೆ ಪ್ರಕರಣ ಇದಾಗಿದ್ದು, ಅನಾಹುತವನ್ನು ತಗ್ಗಿಸುವ ಪ್ರಯತ್ನ ಭರದಿಂದ ಸಾಗಿದೆ.

ತೈಲ ಸೋರಿಕೆಯಿಂದಾಗಿ ಪೆಸಿಫಿಕ್ ವೈಮಾನಿಕ ಪ್ರದರ್ಶನದ ಕೊನೆಯ ದಿನದ ಪ್ರದರ್ಶನವನ್ನು ರದ್ದುಪಡಿಸಲಾಗಿದೆ. ಏಕೆಂದರೆ ಸಾವಿರಾರು ಮಂದಿ ಈ ಕಡಲ ತೀರದಲ್ಲೇ ನಿಂತು ವೈಮಾನಿಕ ಪ್ರದರ್ಶನ ನೋಡವವರಿದ್ದರು.

ಏನು ಕಾರಣ:ಸಮುದ್ರದೊಳಗೆ ಇರುವ ತೈಲ ಸಂಗ್ರಹಣಾ ಸ್ಥಳದಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಪೈಪ್ ಒಡೆದು ಹೋದುದರಿಂದ 1,26,000 ಗ್ಯಾಲನ್ (5,72,807 ಲೀಟರ್) ತೈಲ ಸೋರಿಕೆಯಾಗಿದೆ. ಸದ್ಯ ಪೈಪ್ ದುರಸ್ತಿ ಮಾಡಲಾಗಿದ್ದರೂ, ಅದಾಗಲೇ ಭಾರಿ ಪ್ರಮಾಣದ ತೈಲ ಸೋರಿದ್ದರಿಂದ ಕರಾವಳಿ ಭಾಗದಲ್ಲಿ ಜಲಚರಗಳ ಮಾರಣ ಹೋಮ ನಡೆಯುವಂತಾಗಿದೆ.

1990ರ ಫೆಬ್ರುವರಿಯಲ್ಲಿ ಇಲ್ಲಿನ ಆರೆಂಜ್ ಕೌಂಟಿ ಕಡಲ ತೀರದಲ್ಲಿ ‘ಅಮೆರಿಕನ್ ಟ್ರೇಡರ್’ ಎಂಬ ತೈಲ ಟ್ಯಾಂಕರ್ನ ಆ್ಯಂಕರ್ ತುಂಡಾಗಿ ಸಂಭವಿಸಿದ ದುರಂತದಲ್ಲಿ 4.17 ಲಕ್ಷ ಗ್ಯಾಲನ್ (16 ಲಕ್ಷ ಲೀಟರ್) ತೈಲ ಸೋರಿಕೆಯಾಗಿತ್ತು. 2015ರಲ್ಲಿ ರೆಫುಜಿಯೊ ಸ್ಟೇಟ್ ಬೀಚ್ ಸಮೀಪ ತೈಲ ಪೈಪ್ಲೈನ್ ತುಂಡಾಗಿ 1.43 ಗ್ಯಾಲನ್ (5.41 ಲಕ್ಷ ಲೀಟರ್) ತೈಲ ಸೋರಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.