ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಜ್‌ ಹಾಕಿದ್ದ ಮೊಬೈಲ್‌ ಫೋನ್ ಸ್ಫೋಟದಿಂದ ಕ್ರಾಡಲ್‌ ಫಂಡ್‌ ಸಿಇಒ ಸಾವು

ಮಲೇಷ್ಯಾ ಮೂಲದ ಸಂಸ್ಥೆ
Last Updated 21 ಜೂನ್ 2018, 9:53 IST
ಅಕ್ಷರ ಗಾತ್ರ

ಬೆಂಗಳೂರು: ಚಾರ್ಜ್‌ ಆಗುತ್ತಿದ್ದ ಮೊಬೈಲ್ ಫೋನ್‌ ಸ್ಫೋಟವೇ ಮಲೇಷ್ಯಾ ಮೂಲದ ಕ್ರಾಡಲ್‌ ಫಂಡ್‌ ಸಂಸ್ಥೆ ಸಿಇಒ ನಜ್ರಿನ್‌ ಹಸನ್‌ ಸಾವಿಗೆ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.

ವರದಿಗಳ ಪ್ರಕಾರ, ನಜ್ರಿನ್ ಮಲಗಿದ್ದ ಮಂಚದ ಪಕ್ಕದಲ್ಲಿಯೇ ಎರಡು ಮೊಬೈಲ್‌ ಫೋನ್‌ಗಳಿದ್ದವು. ಚಾರ್ಜ್‌ ಮಾಡಲು ಹಾಕಿದ್ದ ಒಂದು ಫೋನ್‌ ತಡರಾತ್ರಿ ಸ್ಫೋಟಗೊಂಡ ಪರಿಣಾಮ ಇಡೀ ಕೋಣೆಗೆ ಬೆಂಕಿ ಹರಡಿದೆ. ಉಸಿರುಗಟ್ಟಿ ಅಥವಾ ಸ್ಫೋಟದಲ್ಲಿ ಮೊಬೈಲ್‌ ಫೋನ್‌ ತಲೆಗೆ ಸಿಡಿದು ನಜ್ರಿನ್‌ ಸಾವಿಗೀಡಾಗಿದ್ದಾರೆ.

ನಜ್ರಿನ್‌ ಕಳೆದ ವಾರ ಸಾವಿಗೀಡಾಗಿದ್ದರು. ಸಾವಿಗೆ ನಿಖರವಾದ ಕಾರಣ ತಿಳಿದಿರಲಿಲ್ಲ.

(ಸಿಇಒ ನಜ್ರಿನ್‌ ಹಸನ್‌ )

ಗ್ಯಾಜೆಟ್ಸ್‌ ನೌ ವರದಿ ಪ್ರಕಾರ, ನಜ್ರಿನ್‌ ಅವರು ಬ್ಲ್ಯಾಕ್‌ಬೆರಿ ಮತ್ತು ಹುವಾಯಿ ಕಂಪನಿಯ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದರು. ಸ್ಫೋಟದಲ್ಲಿ ಹಾಸಿಗೆ ಸಂಪೂರ್ಣ ಸುಟ್ಟಿದ್ದು, ಯಾವ ಫೋನ್‌ ಚಾರ್ಜ್‌ಗೆ ಇಡಲಾಗಿತ್ತು ಮತ್ತು ಯಾವ ಫೋನ್‌ ಸ್ಫೋಟಗೊಂಡಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಿಲ್ಲ.

ಸಂಬಂಧಿಗಳ ಹೇಳಿಕೆ: ಮೊಬೈಲ್‌ ಫೋನ್‌ ಸಿಡಿದು ನಜ್ರಿನ್‌ ತಲೆಯ ಹಿಂಬದಿಗೆ ತೀವ್ರ ಗಾಯ ಮಾಡಿದೆ. ಆ ಬಳಿಕ ಕೋಣೆಯಲ್ಲಿ ಬೆಂಕಿ ಹರಡಿದೆ. ಆದರೆ,ಬೆಂಕಿ ಆವರಿಸುವುದಕ್ಕೂ ಮುನ್ನವೇ ಸ್ಫೋಟದ ಆಘಾತದಲ್ಲಿ ಅವರು ಸಾವಿಗೀಡಾಗಿರುವುದಾಗಿ ನಜ್ರಿನ್‌ ಸಂಬಂಧಿಗಳು ಹೇಳುತ್ತಿದ್ದಾರೆ.

ಅಧಿಕೃತ ಹೇಳಿಕೆ: ಪೊಲೀಸರ ಪ್ರಕಾರ, ಬೆಂಕಿ–ಹೊಗೆಯಲ್ಲಿ ಉಸಿರಾಟದ ತೊಂದರೆಯಾಗಿ ಅವರು ಮೃತಪಟ್ಟಿದ್ದಾರೆ. ಕ್ರಾಡಲ್‌ ಫಂಡ್‌ ಸಂಸ್ಥೆಯ ಹೇಳಿಕೆ ಪ್ರಕಾರ, ಮೊಬೈಲ್‌ ಸ್ಫೋಟದಿಂದಲೇ ಸಾವು ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT