ಸೇಂಟ್ ಲೂಯಿಸ್: ಶುಕ್ರವಾರ ತಡರಾತ್ರಿಯಿಂದ ಬೀಸುತ್ತಿರುವ ಬಿರುಗಾಳಿಯಿಂದಾಗಿ ಅಮೆರಿಕದ ಸೇಂಟ್ ಲೂಯಿಸ್, ಮಿಸೌರಿ, ಕೆಂಟುಕಿ ಮತ್ತು ವರ್ಜೀನಿಯಾದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, ಹಲವರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಿರುಗಾಳಿಯಿಂದಾಗಿ ಸೆಂಟೆನಿಯಲ್ ಕ್ರಿಶ್ಚಿಯನ್ ಚರ್ಚ್ನ ಗೋಪುರದ ಒಂದು ಭಾಗವು ಉರುಳಿಬಿದ್ದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಬಿರುಗಾಳಿ ಸಂಬಂಧಿತ ಅವಘಡಗಳಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಡ್ವೆಸ್ಟ್ ಮತ್ತು ಮಧ್ಯ-ಅಟ್ಲಾಂಟಿಕ್ನಲ್ಲಿ ಸಂಭವಿಸಿದ ಪ್ರಮುಖ ಚಂಡಮಾರುತದಿಂದ ಬಿರುಗಾಳಿ ಬೀಸುತ್ತಿದೆ ಎನ್ನಲಾಗಿದೆ. ಪ್ರತಿ ವರ್ಷ ವಸಂತಕಾಲದ ಋತುವಿನಲ್ಲಿ ಬಿರುಗಾಳಿಯು ಈ ಪ್ರದೇಶದಲ್ಲಿ ಮಾರಕ ವಿನಾಶ ಉಂಟು ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.