ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮುನ್ನಾ ದಿನ ಅವಳಿ ಸ್ಫೋಟ; 22 ಸಾವು

Published 7 ಫೆಬ್ರುವರಿ 2024, 9:50 IST
Last Updated 7 ಫೆಬ್ರುವರಿ 2024, 9:50 IST
ಅಕ್ಷರ ಗಾತ್ರ

ಕ್ವೆಟ್ಟಾ: ನೈಋತ್ಯ ಪಾಕಿಸ್ತಾನದಲ್ಲಿ ಚುನಾವಣಾ ಅಭ್ಯರ್ಥಿಗಳ ಕಚೇರಿಯ ಹೊರಗಡೆ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಮುನ್ನಾ ದಿನ ಈ ಭೀಕರ ಅವಳಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 37 ಮಂದಿ ಗಾಯಗೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಫೆಬ್ರುವರಿ 8ರಂದು (ಗುರುವಾರ) ನಡೆಯಲಿದೆ.

ಮೊದಲ ಸ್ಫೋಟವು ಕ್ವೆಟ್ಟಾ ನಗರದಿಂದ ಸುಮಾರು 50 ಕಿ.ಮೀ. ದೂರದ (ಅಘ್ಗಾನಿಸ್ತಾನದ ಗಡಿಯಿಂದ ಸುಮಾರು 100 ಕಿ.ಮೀ. ದೂರ) ಪಿಶಿನ್ ಜಿಲ್ಲೆಯ ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಬಳಿ ಸಂಭವಿಸಿದೆ.

ಕಿಲ್ಲಾ ಸೈಫುಲ್ಲಾ ನಗರದಲ್ಲಿ ಇಸ್ಲಾಮಿಸ್ಟ್ ಜಮಿಯತ್ ಉಲೇಮಾ ಎ ಇಸ್ಲಾಂ ಎಫ್ (ಜೆಯುಐ-ಎಫ್) ಪಕ್ಷದ ಚುನಾವಣಾ ಕಚೇರಿ ಬಳಿ ಎರಡನೇ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಚುನಾವಣೆಗೆ ಐದು ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ದೇಶದಲ್ಲಿ 90 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT