ಮಸ್ಕತ್: ಇರಾನ್ನ ಬಂದರ್ ಅಬ್ಬಾಸ್ ನಗರದಲ್ಲಿರುವ ಶಾಹಿದ್ ರಜಯೀ ಬಂದರಿನಲ್ಲಿ ಶನಿವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಇಲ್ಲಿಯವರೆಗೆ 40 ಮಂದಿ ಮೃತಪಟ್ಟು, 800ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗಿನವರೆಗೂ ಹೆಲಿಕಾಪ್ಟರ್ ಮೂಲಕ ಬೆಂಕಿಯನ್ನು ನಂದಿಸಲಾಗಿದೆ. ಇಸ್ರೇಲ್ ವಿರುದ್ಧ ಬಳಸುವ ರಾಕೆಟ್ಗಳಿಗೆ ಮರುಪೂರಣ ಮಾಡಲು ಮಾರ್ಚ್ನಲ್ಲಿ ಚೀನಾದಿಂದ ಇಂಧನವನ್ನು ತರಿಸಿಕೊಳ್ಳಲಾಗಿತ್ತು. ಈ ಇಂಧನ ಸಂಗ್ರಹಗಾರದಲ್ಲಿಯೇ ಸ್ಫೋಟ ಸಂಭವಿಸಿದೆ.

ಅಣ್ವಸ್ತ್ರ ತಯಾರಿಕೆಯಲ್ಲಿ ಇರಾನ್ ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗಿರುವ ಬಗ್ಗೆ ಒಮಾನ್ನಲ್ಲಿ ಇರಾನ್ ಹಾಗೂ ಅಮೆರಿಕವು ಶನಿವಾರ ಮೂರನೇ ಸುತ್ತಿನ ಮಾತುಕತೆ ನಡೆಸಿತ್ತು. ಇದೇ ದಿನವೇ ಈ ಸ್ಫೋಟ ಸಂಭವಿಸಿದೆ.

‘ಚೀನಾದಿಂದ ಮಾರ್ಚ್ನಲ್ಲಿಯೇ ಇಂಧನವಿದ್ದ ಕಂಟೇನರ್ಗಳು ಇರಾನ್ ತಲುಪಿವೆ. ಆದರೂ ಇರಾನ್ ಈ ಕಂಟೇನರ್ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿರಲಿಲ್ಲ’ ಎಂದು ಖಾಸಗಿ ಭದ್ರತಾ ಸಂಸ್ಥೆಯೊಂದು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.