ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಚೆಲ್ ಒಬಾಮ ತಾಯಿ ಮೇರಿಯನ್ ರಾಬಿನ್ಸನ್ ನಿಧನ

Published 1 ಜೂನ್ 2024, 5:28 IST
Last Updated 1 ಜೂನ್ 2024, 5:28 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರವರ ಪತ್ನಿ ಮಿಚೆಲ್ ಒಬಾಮಾ ಅವರ ತಾಯಿ ಮೇರಿಯನ್ ರಾಬಿನ್ಸನ್ ನಿಧನರಾದರು.

ಅವರಿಗೆ 86 ವರ್ಷ ವಯಸ್ಸಾಗಿತ್ತು. 

1937ರಲ್ಲಿ ಜನಿಸಿದ ಮೇರಿಯನ್ ರಾಬಿನ್ಸನ್ ಶಿಕ್ಷಕಿಯಾಗಿ ನಂತರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯಾದರ್ಶಿಯಾಗಿ ಕೆಲಸ ಮಾಡಿದ್ದರು. ಇವರಿಗೆ ಮಿಚೆಲ್‌ ಮತ್ತು ಕ್ರೇಗ್‌ ಎಂಬ ಇಬ್ಬರು ಮಕ್ಕಳಿದ್ದರು. 

ಮಿಚೆಲ್‌ ಅವರನ್ನು ಬರಾಕ್‌ ಒಬಾಮ ವಿವಾಹವಾದ ಬಳಿಕ ಮೇರಿಯನ್ ಅವರೊಟ್ಟಿಗೆ ನೆಲೆಸಿದರು. ಒಬಾಮ–ಮಿಚೆಲ್‌ ಅವರ ಇಬ್ಬರು ಮಕ್ಕಳನ್ನು ಇವರೇ ನೋಡಿಕೊಂಡರು ಎಂದು ಮಿಚೆಲ್‌ ಈ ಹಿಂದೆ ಹೇಳಿದ್ದರು. 

ಒಬಾಮ ಹಾಗೂ ಮಿಚೆಲ್‌ ಅವರು ಮೇರಿಯನ್ ರಾಬಿನ್ಸನ್ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಮಾದರಿಯಂತೆ ಬದುಕಲು ಪ್ರಯತ್ನಿಸುವುದಾಗಿ ಅವರು ಒಬಾಮ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT