ಬಮಾಕೊ (ಮಾಲಿ): ಮಾಲಿ ರಾಜಧಾನಿ ಬಮಾಕೊದಲ್ಲಿ ಸೇನಾ ತರಬೇತಿ ಶಿಬಿರವೂ ಸೇರಿದಂತೆ ನಗರದ ವಿವಿಧೆಡೆ ಉಗ್ರರು ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬಂದೂಕುಧಾರಿ ಉಗ್ರರ ಗುಂಪು ಮಂಗಳವಾರ ಮುಂಜಾನೆ ಇಲ್ಲಿನ ಫಾಲಡೈ ಸೇನಾ ಶಾಲೆಗೆ ನುಸುಳಲು ಯತ್ನಿಸಿತ್ತು. ಸೇನೆಯು ಕಾರ್ಯಾಚರಣೆ ಕೈಗೊಂಡು ಉಗ್ರರ ಯತ್ನವನ್ನು ವಿಫಲಗೊಳಿಸಿದೆ ಎಂದು ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆಂದು ಎಎಫ್‌ಪಿ ವರದಿ ಮಾಡಿದೆ.
ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ಬೆನ್ನಲ್ಲೆ ಬಮಾಕೊ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲಿಯಲ್ಲಿ ಅಲ್–ಖೈದಾ ಉಗ್ರರು ಜುಲೈನಲ್ಲಿ ನಡೆಸಿದ್ದ ದಾಳಿಯಲ್ಲಿ ರಷ್ಯಾ ಮೂಲದ 50 ಮಂದಿ ಬಾಡಿಗೆ ಸೈನಿಕರು ಮೃತಪಟ್ಟಿದ್ದರು.