ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾ ಮುಸ್ಲಿಮರ ಬೃಹತ್‌ ರ‍್ಯಾಲಿ

Last Updated 25 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಕುಟುಪಲಾಂಗ್: ವಿಶ್ವದ ಅತಿದೊಡ್ಡ ನಿರಾಶ್ರಿತರ ಶಿಬಿರವೆಂದೇ ಖ್ಯಾತಿ ಪಡೆದಿರುವ ಕುಟುಪಲಾಂಗ್‌ನಲ್ಲಿ 2 ಲಕ್ಷದಷ್ಟು ರೋಹಿಂಗ್ಯಾ ಮುಸ್ಲಿಮರು ಭಾನುವಾರ ರ‍್ಯಾಲಿ ನಡೆಸಿದರು.

ಎರಡು ವರ್ಷಗಳ ಹಿಂದೆ ತಮ್ಮವರ ಮೇಲೆ ನಡೆದ ಹಿಂಸಾಚಾರವನ್ನು ಖಂಡಿಸಿ ಲಕ್ಷಾಂತರ ಜನ ದೇಶ ತೊರೆದಿದ್ದರು. ಮ್ಯಾನ್ಮಾರ್‌ ಸೇನೆಯ ವಿರುದ್ಧ ಸಿಡಿದೆದ್ದ ಇವರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ‘ನರಮೇಧ ದಿನ’ ಎಂದು ಕರೆಯುವ ಈ ದಿನ ಎರಡನೇ ವರ್ಷಾಚರಣೆಗಾಗಿ ದೊಡ್ಡಮಟ್ಟದಲ್ಲಿ ರ‍್ಯಾಲಿ ನಡೆಸಿದರು.

ಮ್ಯಾನ್ಮಾರ್‌ನ ರಖೈನ್‌ ರಾಜ್ಯದಿಂದ 2017 ರ ಆಗಸ್ಟ್‌ನಲ್ಲಿ 7.40 ಲಕ್ಷ ರೋಹಿಂಗ್ಯಾಗಳು ಪರಾರಿಯಾಗಿದ್ದರು. ತಮ್ಮ ಮೇಲೆ ನಡೆದ ಅಮಾನವೀಯ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ದೇಶ ತೊರೆದಿದ್ದರು. ಆಗ್ನೇಯ ಬಾಂಗ್ಲಾದೇಶದಿಂದ 2 ಲಕ್ಷ ರೋಹಿಂಗ್ಯಾಗಳು ಓಡಿಹೋಗಿದ್ದರು.

‘ದೇವರು ದೊಡ್ಡವನು, ರೋಹಿಂಗ್ಯಾಗಳು ದೀರ್ಘಾಯುಷಿಗಳು’ ಎಂಬ ಘೋಷಣೆಯನ್ನು ಪುರುಷರು ರ‍್ಯಾಲಿಯಲ್ಲಿ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT