ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ ಮೇಲಿಂದ ಬಿದ್ದಿದ್ದ ಆಸ್ಟ್ರೇಲಿಯಾ ರೂಪದರ್ಶಿ ಸೆನ್ನಾ ವೇರ್‌ ನಿಧನ

Published 6 ಮೇ 2023, 4:42 IST
Last Updated 6 ಮೇ 2023, 4:42 IST
ಅಕ್ಷರ ಗಾತ್ರ

ಸಿಡ್ನಿ: ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ್ದ ಹಾಗೂ ಆಸ್ಟ್ರೇಲಿಯಾದ ರೂಪದರ್ಶಿ ಸೆನ್ನಾ ವೇರ್‌ ಮೃತಪಟ್ಟಿದ್ದಾರೆ. ಅವರಿಗೆ 23 ವರ್ಷ ವಯಸ್ಸಾಗಿತ್ತು.

ಕಳೆದ ತಿಂಗಳು ಸೆನ್ನಾ ವೇರ್‌ ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದಿದ್ದರು. ನಂತರ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಏಪ್ರಿಲ್‌ 4ರಂದ ವಿಡ್ಸಂರ್‌ ಉದ್ಯಾನದಲ್ಲಿ ಕುದುರೆ ಸವಾರಿ ಮಾಡುವಾಗ ಬಿದ್ದಿದ್ದರು. ಅಂದಿನಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 

ಸೆನ್ನಾ ವೇರ್‌ ಮೃತಪಟ್ಟಿರುವುದನ್ನು ಅವರ ಕುಟುಂಬದವರು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT