ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ಪ್ರಮಾಣ ವಚನ: ಸಮಾರಂಭದಲ್ಲಿ ಭಾಗಿಯಾಗುವುದು ಹೆಮ್ಮೆಯ ಸಂಗತಿ: ಮುಯಿಜು

Published 8 ಜೂನ್ 2024, 16:32 IST
Last Updated 8 ಜೂನ್ 2024, 16:32 IST
ಅಕ್ಷರ ಗಾತ್ರ

ಮಾಲೆ: ನವದೆಹಲಿಯಲ್ಲಿ ಭಾನುವಾರ ನಡೆಯಲಿರುವ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ಸಂಗತಿ ಎಂದು ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಶನಿವಾರ ಹೇಳಿದ್ದಾರೆ.

‘ಭಾರತದೊಂದಿಗಿನ ನಿಕಟ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಪ್ರಧಾನ ಮಂತ್ರಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಮಾಲ್ಡೀವ್ಸ್-ಭಾರತದ ಸಂಬಂಧವು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಈ ಭೇಟಿಯಿಂದ ತೋರಿಸುತ್ತದೆ’ ಎಂದು ಮುಯಿಜು ಅವರು ಹೇಳಿದ್ದಾರೆ.

ಮಾಲ್ಡೀವ್ಸ್‌ನಲ್ಲಿರುವ ಭಾರತದ ಹೈಯರ್ ಕಮಿಷನರ್ ಮುನು ಮಹಾವರ್ ಅವರು ಅಧ್ಯಕ್ಷರ ಕಚೇರಿಗೆ ತೆರಳಿ, ಅಧ್ಯಕ್ಷ ಮೊಹಮ್ಮದ್ ಮುಯಿಜು  ಆಹ್ವಾನ ಪತ್ರವನ್ನು ನೀಡಿದರು. ಈ ಆಹ್ವಾನಕ್ಕಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ ಅಧ್ಯಕ್ಷ ಮುಯಿಝು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಭಾಗಿಯಾಗಲು ಸಂತೋಷವಿದೆ ಎಂದು ಹೇಳಿದರು.

ಮುಯಿಜು ಅವರ ಕಚೇರಿ, ಅವರು ಯಾವಾಗ ಭಾರತಕ್ಕೆ ತೆರಳುತ್ತಾರೆ ಎಂಬುದನ್ನು ಬಹಿರಂಗಪಡಿಸಲಿಲ್ಲ.

ಪ್ರಮಾಣ ವಚನ ಸಮಾರಂಭವು ಮಾಲ್ದೀವ್ಸ್‌ ಜೊತೆಗೆ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್ ಮತ್ತು ಸೀಶೆಲ್ಸ್ ಸೇರಿದಂತೆ ನೆರೆಯ ದೇಶಗಳ ನಾಯಕರ ಉಪಸ್ಥಿತಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ, ಇದು ಭಾರತದ 'ನೆರೆಹೊರೆ ಮೊದಲು' ನೀತಿಯ ಭಾಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT