ವಾಷಿಂಗ್ಟನ್: ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ‘ರಾಮಚರಿತಮಾನಸ’ ಗ್ರಂಥವನ್ನು ಆಧರಿಸಿದ ‘ರಾಮಕಥೆ’ ನಡೆಯಲಿದೆ. ಅಧ್ಯಾತ್ಮ ಗುರು ಗುಜರಾತ್ನ ಮೊರಾರಿ ಬಾಪು ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಒಟ್ಟು ಒಂಭತ್ತು ದಿನಗಳವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಮೊರಾರಿ ಬಾಪು ಅವರು ಪಿಟಿಐಗೆ ಸಂದರ್ಶನ ನೀಡಿದ್ದಾರೆ. ‘ಇದೊಂದು ರೀತಿ ಕನಸು ನನಸಾದ ಕ್ಷಣ ಮತ್ತು ದೇವರ ಅನುಗ್ರಹ. ವಿಶ್ವಸಂಸ್ಥೆಯಲ್ಲಿ ‘ರಾಮಕಥೆ’ ನಡೆಸಿಕೊಡುವುದು ಎಂದರೆ, ಜಾಗತಿಕ ಸಾಮರಸ್ಯ ಸಾಧಿಸುವುದಕ್ಕೆ ಇಡುವ ಹೆಜ್ಜೆಯಾಗಿದೆ’ ಎಂದು ಮೊರಾರಿ ಬಾಪು ಅವರು ಅಭಿಪ್ರಾಯಪಡುತ್ತಾರೆ.

‘ರಾಮಚರಿತಮಾನಸವು ಸತ್ಯ, ಪ್ರೇಮ ಹಾಗೂ ಸಹಾನುಭೂತಿಯಂಥ ಜಾಗತಿಕ ಮೌಲ್ಯಗಳ ಕುರಿತು ಮಾತನಾಡುತ್ತದೆ. ಈ ಮೌಲ್ಯಗಳು ಇಂದಿನ ಜಗತ್ತಿಗೆ ಅಗತ್ಯವಾಗಿದೆ’ ಎಂದರು. 77 ವರ್ಷದ ಬಾಪು ಅವರು ಸುಮಾರು 65ಕ್ಕೂ ಅಧಿಕ ವರ್ಷಗಳಿಂದ ‘ರಾಮಕಥೆ’ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಅಮೆರಿಕ, ಬ್ರಿಟನ್, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.