ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುರಿತಾದ ಕೆಲವು ಪೋಸ್ಟ್ಗಳ ಕುರಿತಂತೆ ಜಗತ್ತಿನ ಶ್ರೀಮಂತ ಉದ್ಯಮಿ ಮತ್ತು ಟ್ರಂಪ್ ಅವರ ಮಾಜಿ ಸಲಹೆಗಾರ ಇಲಾನ್ ಮಸ್ಕ್ ವಿಷಾದ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತಂತೆ ಮಾಡಿದ ಕೆಲವು ಟೀಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಟೀಕೆ ಮಾಡುವುದರಲ್ಲಿ ನಾವು ಮಿತಿ ಮೀರಿದ್ದೆವು ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಖರ್ಚು ಮತ್ತು ವೆಚ್ಚ ಮಸೂದೆ(ಡಿಒಜಿಇ) ವಿರೋಧಿಸಿ ರಿಪಬ್ಲಿಕನ್ ಸದಸ್ಯರ ವಿರುದ್ಧವೇ ಸಿಡಿದಿದ್ದ ಮಸ್ಕ್ಗೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಬೆದರಿಕೆ ಹಾಕಿದ ಕೆಲವೇ ದಿನಗಳಲ್ಲಿ ಮಸ್ಕ್ ವಿಷಾದ ವ್ಯಕ್ತಪಡಿಸಿದ್ದಾರೆ.

ಸದ್ಯ, ಅಮೆರಿಕ ಸಂಸತ್ ಮುಂದೆ ಇರುವ ಮಸೂದೆ ಕುರಿತಂತೆ ಮಸ್ಕ್ ಟೀಕೆಗಳ ಬಳಿಕ ಇಬ್ಬರ (ಟ್ರಂಪ್, ಮಸ್ಕ್) ನಡುವೆ ಬಿರುಕು ಮೂಡಿತ್ತು. ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಟೀಕೆಗೈದಿದ್ದರು.

ಈ ಮಧ್ಯೆ, ಮಸ್ಕ್ ಜೊತೆಗಿನ ಸಂಬಂಧವನ್ನು ಸುಧಾರಿಸಿಕೊಳ್ಳುವ ಯಾವುದೇ ಆಶಯ, ಅವರ ಜೊತೆ ಮಾತನಾಡುವ ಯಾವುದೇ ಉದ್ದೇಶ ಇಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದರು.

ಈ ನಡುವೆ, ಟ್ರಂಪ್ ಕುರಿತಂತೆ ನಾವು ಮಾಡಿದ ಯಾವ ಟೀಕೆ ಮಿತಿ ಮೀರಿತ್ತು ಎಂಬುದನ್ನು ಮಸ್ಕ್ ಸಹ ಸ್ಪಷ್ಟಪಡಿಸಿಲ್ಲ.

ಮಸೂದೆಯಿಂದ ವಿವಾದ

ಸರ್ಕಾರದ ಕಾರ್ಯದಕ್ಷತಾ ಇಲಾಖೆ (ಡಿಒಜಿಇ) ಉಳಿಸುವ ಹಣ ಬಳಿಸಿಕೊಂಡು ಅಮೆರಿಕದಲ್ಲಿ ಗಣನೀಯ ತೆರಿಗೆ ಕಡಿತ ಮಾಡುವುದು ಟ್ರಂಪ್ ಅವರ ಉದ್ದೇಶವಾಗಿತ್ತು. ಇದು ‘ದೊಡ್ಡ, ಸುಂದರ ಮಸೂದೆ’ (ಒಬಿಬಿಬಿ) ಎಂದೇ ಅವರು ಪ್ರತಿಪಾದಿಸಿದ್ದರು. ಡಿಒಜಿಇಯಿಂದ ಅರ್ಧದಲ್ಲಿಯೇ ಮಸ್ಕ್ ನಿರ್ಗಮಿಸಿದ ನಂತರವೂ ಟ್ರಂಪ್ ಮಸೂದೆ ತರುವ ದಿಸೆಯಲ್ಲಿ ಮುಂದಡಿ ಇಟ್ಟಿದ್ದರು.

ಆದರೆ, ಈ ಮಸೂದೆಯಿಂದ ಅಮೆರಿಕದ ಜನರ ಮೇಲೆ ಸಾಲದ ಹೊರೆ ಹೆಚ್ಚಲಿದೆ ಎನ್ನುವುದು ಮಸ್ಕ್ ಅಭಿಪ್ರಾಯವಾಗಿತ್ತು. ಈ ವಿಚಾರದಲ್ಲಿ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷದ ಮುಖಂಡರ ಮನವೊಲಿಕೆಯ ಪ್ರಯತ್ನ ನಡೆಸಿದರಾದರೂ, ಅದು ಫಲ ನೀಡಲಿಲ್ಲ. ಅಲ್ಲಿಗೂ ಸುಮ್ಮನಾಗದ ಮಸ್ಕ್, ತನ್ನದೇ ‘ಎಕ್ಸ್’ ವೇದಿಕೆಯಲ್ಲಿ ‘ಮಸೂದೆ ತಡೆಯಿರಿ’ ('ಕಿಲ್ ದ ಬಿಲ್) ಆಂದೋಲನ ಆರಂಭಿಸಿದ್ದರು. ಅದು ಟ್ರಂಪ್ ಮತ್ತು ಮಸ್ಕ್ ನಡುವಿನ ಮನಸ್ತಾಪ ಸ್ಫೋಟಗೊಳ್ಳಲು ಕಾರಣವಾಯಿತು.

ಸುಂಕ ಮತ್ತು ವೆಚ್ಚ ಮಸೂದೆಯು ತನ್ನ ಸರ್ಕಾರದ ಮಹತ್ವದ ಆರ್ಥಿಕ ನೀತಿಯಾಗಿದೆ ಎಂದು ಟ್ರಂಪ್ ಪ್ರಚಾರ ಮಾಡಿದರು. ಅದು ಬೃಹತ್ತಾದ, ಅತಿರೇಕದ ಮಸೂದೆಯಾಗಿದ್ದು, ಕಾಯ್ದೆಯಾಗಿ ಜಾರಿಯಾದರೆ, ದೇಶದ ಸಾಲದ ಹೊರೆ ಹೆಚ್ಚಿಸುವುದರ ಜತೆಗೆ, ಡಿಒಜಿಇ ಮುಖ್ಯಸ್ಥನಾಗಿ ತಾನು ಮಾಡಿದ ಕೆಲಸವನ್ನೂ ನೀರುಪಾಲು ಮಾಡುತ್ತದೆ ಎಂದು ಮಸ್ಕ್ ಮಸೂದೆ ವಿರುದ್ಧ ಪ್ರಚಾರ ಮಾಡತೊಡಗಿದ್ದರು. ಅಧ್ಯಕ್ಷರ ವಿರುದ್ಧ ಹೋಗುವುದರ ಬಗ್ಗೆ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅಂಥವರು ಎಚ್ಚರಿಸಿದರೂ ಮಸ್ಕ್ ಹಿಂದೆ ಸರಿದಿರಲಿಲ್ಲ. ಮಸ್ಕ್ ವರ್ತನೆಯಿಂದ ತಮಗೆ ಬೇಸರವಾಗಿದೆ ಎಂದು ಟ್ರಂಪ್ ಅವರೇ ಹೇಳಿಕೊಂಡರು. ಮತ್ತೂ ಮುಂದುವರಿದ ಮಸ್ಕ್, ‘ನಾನಿಲ್ಲದಿದ್ದರೆ ಟ್ರಂಪ್ ಅವರು ಚುನಾವಣೆಯಲ್ಲಿ ಸೋಲುತ್ತಿದ್ದರು’ ಎಂದೂ ಪ್ರತಿಪಾದಿಸಿದ್ದರು.

‘ಮಸ್ಕ್ಗೆ ತಲೆ ಕೆಟ್ಟಿದೆ’ ಎಂದ ಟ್ರಂಪ್, ‘ಮಸ್ಕ್ ಅವರು ಟ್ರಂಪ್ ಎನ್ನುವ ಮಾನಸಿಕ ವ್ಯಾಧಿಯಿಂದ ಬಳಲುತ್ತಿದ್ದಾರೆ’ ಎಂದಿದ್ದಲ್ಲದೇ, ಸರ್ಕಾರದೊಂದಿಗೆ ಅವರು ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಪಡಿಸುವ ಬೆದರಿಕೆಯನ್ನೂ ಹಾಕಿದ್ದರು. ಆದರೂ ಸುಮ್ಮನಾಗದ ಮಸ್ಕ್, ಮುಂದಿನ ವರ್ಷ ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಘೋಷಿಸಿದ್ದು ಟ್ರಂಪ್ ಅವರನ್ನು ಕೆರಳಿಸಿತ್ತು. ತಮ್ಮ ಮತ್ತು ಮಸ್ಕ್ ನಡುವಣ ಸಂಬಂಧ ಕೊನೆಗೊಂಡಿದೆ ಎಂದು ಘೋಷಿಸಿದ್ದ ಟ್ರಂಪ್, ಒಂದು ವೇಳೆ ಅವರು ಡೆಮಾಕ್ರಟಿಕ್ ಅಭ್ಯರ್ಥಿಗಳನ್ನು ಬೆಂಬಿಸಿದ್ದೇ ಆದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
.ಡೆಮಾಕ್ರಟ್ಗಳಿಗೆ ಹಣಕಾಸಿನ ನೆರವು ನೀಡಿದರೆ ಹುಷಾರ್: ಮಸ್ಕ್ಗೆ ಟ್ರಂಪ್ ಎಚ್ಚರಿಕೆ.ಅಮೆರಿಕ | ವಿಮಾನ ಏರುವಾಗ ಎಡವಿದ ಟ್ರಂಪ್: ಬೈಡನ್ಗೆ ಹೋಲಿಸಿದ ನೆಟ್ಟಿಗರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.