ನೈಪಿತಾವ್ : ಮ್ಯಾನ್ಮಾರ್ನ ಮಿಲಿಟರಿ ಸರ್ಕಾರವು ದೇಶದ ಎಲ್ಲ ಯುವಕ ಮತ್ತು ಯುವತಿಯರು ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

18 ರಿಂದ 35 ವರ್ಷ ವಯಸ್ಸಿನ ಯುವಕರು ಮತ್ತು 18 ರಿಂದ 27 ವರ್ಷ ವಯಸ್ಸಿನ ಯುವತಿಯರು 2 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. 45 ವರ್ಷ ವಯಸ್ಸಿನವರೆಗಿನ ವೈದ್ಯರು ಮುಂತಾದ ಪರಿಣಿತರು ಮೂರು ವರ್ಷಗಳ ಕಾಲ ಸೇನೆಗೆ ಸೇವೆ ಸಲ್ಲಿಸಬೇಕು.

‘ದೇಶವನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸೈನಿಕರದ್ದಲ್ಲ, ಪ್ರತಿಯೊಬ್ಬ ನಾಗರಿಕನದ್ದು. ಹಾಗಾಗಿ ಎಲ್ಲರೂ ನಾಗರಿಕ ಸೇನಾ ಸೇವಾ ಕಾನೂನನ್ನು ಹೆಮ್ಮೆಯಿಂದ ಪಾಲಿಸಬೇಕು’ ಎಂದು ಮಿಲಿಟರಿ ಸರ್ಕಾರದ ವಕ್ತಾರ ಝಾ ಮಿನ್ ಟುನ್ ತಿಳಿಸಿದ್ದಾರೆ.

2021ರಿಂದ ಸೇನೆಯ ನಿಯಂತ್ರಣದಲ್ಲಿರುವ ಮ್ಯಾನ್ಮಾರ್ನಲ್ಲಿ ಯೋಧರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಕಾನೂನನ್ನು ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.