ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಿಂದ ಜಲವಿದ್ಯುತ್‌ ಸ್ಥಾವರ ಅಭಿವೃದ್ಧಿ: ನೇಪಾಳದಿಂದ ಅನುಮೋದನೆ

Published 29 ಮೇ 2023, 13:40 IST
Last Updated 29 ಮೇ 2023, 13:40 IST
ಅಕ್ಷರ ಗಾತ್ರ

ಕಠ್ಮಂಡು: ಭಾರತ ಸರ್ಕಾರ ಸ್ವಾಮ್ಯದ ಸಟ್ಲುಜ್ ಜಲ್ ವಿದ್ಯುತ್‌ ನಿಗಮ್‌ (ಎಸ್‌ಜೆವಿಎನ್‌) ಸಂಸ್ಥೆಯು ನೇಪಾಳದಲ್ಲಿ ತನ್ನ ಎರಡನೇ ಜಲವಿದ್ಯುತ್ ಸ್ಥಾವರ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲು ಅಲ್ಲಿಯ ಸರ್ಕಾರ ಭಾನುವಾರ ನಿರ್ಧರಿಸಿದೆ.

‘669– ಮೆಗಾವ್ಯಾಟ್‌ ಸಾಮರ್ಥ್ಯದ ಅರುಣ್‌ ಜಲವಿದ್ಯುತ್‌ ಕೆಳದಂಡೆ ಯೋಜನೆ’ ಕರಡು ಒಪ್ಪಂದಕ್ಕೆ ನೇಪಾಳ ಪ್ರಧಾನಿ ಪುಷ್ಪ ಕಮಲ್ ದ‌ಹಾಲ್‌ ಪ್ರಚಂಡ ಅವರ ನೇತೃತ್ವದ ನೇಪಾಳ ಬಂಡವಾಳ ಹೂಡಿಕೆ ಮಂಡಳಿಯು (ಐಬಿಎನ್‌) ಅನುಮೋದನೆ ನೀಡಿತು.  

ಪ್ರಚಂಡ ಅವರು ಭಾರತಕ್ಕೆ ಭೇಟಿ ನೀಡಲಿರುವ ಕೆಲವೇ ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ.  

ಸದ್ಯ ಎಸ್‌ಜೆವಿಎನ್‌ ಸಂಸ್ಥೆಯು ಪೂರ್ವ ನೇಪಾಳದಲ್ಲಿ ಅರಣ್ ನದಿ ತೀರದಲ್ಲಿ 900 ಮೆಗಾ ವ್ಯಾಟ್‌ನ ಅರುಣ್‌–3 ಜಲವಿದ್ಯುತ್‌ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯು 2024ರಲ್ಲಿ ಸಂಪೂರ್ಣವಾಗಲಿದೆ. 

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT