ಬಲರಾಂಪುರ: ನೇಪಾಳದ ಪೋಖರಾಗೆ ತೆರಳುತ್ತಿದ್ದ ಬಸ್ ಡಾಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 25 ಭಾರತೀಯ ಪ್ರವಾಸಿಗರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
.ನ್ಯಾಯಾಂಗ ಸಹಕಾರ: ಭಾರತ –ನೇಪಾಳ ‘ಸುಪ್ರೀಂ ಕೋರ್ಟ್’ ನಡುವೆ ಒಪ್ಪಂದ .
ನೇಪಾಳದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರ ಪ್ರದೇಶದ ಡಾಂಗ್ನ ತುಳಸಿಪುರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 19 ಪ್ರವಾಸಿಗರನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ನೇಪಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಅಪಘಾತ ನಡೆದಿದ್ದು, ಬ್ರೇಕ್ ವೈಫಲ್ಯದಿಂದ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಗಾಯಾಳುಗಳಲ್ಲಿ ಹೆಚ್ಚಿನವರು ಉತ್ತರ ಪ್ರದೇಶದ ಲಖನೌ, ಸೀತಾಪುರ, ಹರ್ದೋಯಿ ಮತ್ತು ಬಾರಾಬಂಕಿ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.
.ದಯವಿಟ್ಟು ವಾಪಸ್ ಬನ್ನಿ: ನೇಪಾಳ ವಿದ್ಯಾರ್ಥಿಗಳಲ್ಲಿ ಕೆಐಐಟಿ ಸಂಸ್ಥಾಪಕ ಮನವಿ.
ಅಪಘಾತದ ಬಗ್ಗೆ ಮಾಹಿತಿ ಪಡೆದ ನೇಪಾಳದ ಗಧಾವಾದ ಪೊಲೀಸರು ಸ್ಥಳಕ್ಕೆ ತೆರಳಿ, ಗಾಯಾಳುಗಳನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. 19 ಮಂದಿಯನ್ನು ತುಳಸಿಪುರಕ್ಕೆ ರವಾನಿಸಲಾಗಿದೆ.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ 19 ಭಾರತೀಯರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನು ತುಳಸಿಪುರದ ವೃತ್ತ ಅಧಿಕಾರಿ ಬ್ರಿಜನಂದನ್ ರೈ ಖಚಿತ ಪಡಿಸಿದ್ದಾರೆ.
.ಟಿಬೆಟ್ – ನೇಪಾಳ ಗಡಿಯಲ್ಲಿ ಭೂಕಂಪ: ಉತ್ತರ ಭಾರತದ ರಾಜ್ಯಗಳ ಮೇಲೂ ಪ್ರಭಾವ.
ಗಾಯಾಳುಗಳಲ್ಲಿ ಕೆಲವರನ್ನು ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಅವರಿಗೆ ನೇಪಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
.BRI ಯೋಜನೆಗೆ ಚೀನಾ ಜೊತೆ ಒಪ್ಪಂದ: ಭಾರತ ಆಕ್ಷೇಪವೆತ್ತಬಾರದು ಎಂದ ನೇಪಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.