ಕಠ್ಮಂಡು: ಕೋವಿಡ್–19 ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ 9 ತಿಂಗಳಿನಿಂದ ಮುಚ್ಚಲಾಗಿದ್ದ ಇಲ್ಲಿನ ಪ್ರಸಿದ್ಧ ಪಶುಪತಿನಾಥ ಹಿಂದೂ ದೇವಾಲಯವನ್ನು ಭಕ್ತರ ದರ್ಶನಕ್ಕಾಗಿ ಬುಧವಾರ ತೆರೆಯಲಾಯಿತು.

9 ತಿಂಗಳಿನಿಂದ ದೇವಾಲಯದ ಬಾಗಿಲು ಮುಚ್ಚಿದ್ದಕ್ಕಾಗಿ ದೇವರಿಗೆ ಕ್ಷಮೆ ಕೋರಿ ಮಂಗಳವಾರ ದೇವಾಲಯದ ಪ್ರವೇಶದ್ವಾರದಲ್ಲಿ ಪ್ರಾಯಶ್ಚಿತ್ತ ಪೂಜೆಯನ್ನು ನಡೆಸಲಾಯಿತು.

ಪಶುಪತಿನಾಥ ದೇವಾಲಯವು ನೇಪಾಳದ ಅತಿದೊಡ್ಡ ದೇವಾಲಯ ಸಂಕೀರ್ಣವಾಗಿದ್ದು, ಬಾಗಮತಿ ನದಿಯ ಎರಡೂ ಬದಿಯಲ್ಲಿ ವ್ಯಾಪಿಸಿದೆ. ಭಾರತ ಮತ್ತು ನೇಪಾಳದಿಂದ ನಿತ್ಯವೂ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

‘ಕೋವಿಡ್ಗೆ ಸಂಬಂಧಿಸಿದ ಎಲ್ಲಾ ಸೂಕ್ತ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದೇವಾಲಯದ ಬಾಗಿಲನ್ನು ತೆರೆಯಲಾಗಿದೆ’ ಎಂದು ಪಶುಪತಿ ದೇವಾಲಯದ ಟ್ರಸ್ಟ್ನ ಪ್ರದೀಪ್ ಧಾಕಲ್ ತಿಳಿಸಿದ್ದಾರೆ.

‘ಪ್ರವಾಸಿಗರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆಯಾದರೂ, ವಿಶೇಷ ಪೂಜೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಸದ್ಯಕ್ಕೆ ನಡೆಸಲಾಗುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ಮಾರ್ಚ್ನಲ್ಲಿ ಲಾಕ್ಡೌನ್ ಘೋಷಣೆಯಾದಾಗಿನಿಂದಲೂ ನೇಪಾಳ ಸರ್ಕಾರ ಈ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.