ಟೆಲ್ ಅವಿವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಂತರ ಇರಾನ್ ವಿರುದ್ಧ ಬೃಹತ್ ದಾಳಿ ನಡೆಸುವುದನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ತಡೆದಿದ್ದಾರೆ ಎಂದು ಅವರ ಕಚೇರಿ ಹೇಳಿದೆ.

ಮಂಗಳವಾರ ಮುಂಜಾನೆ ಇರಾನ್ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್, ಇರಾನಿನ ರಾಡಾರ್ ವ್ಯವಸ್ಥೆಯನ್ನು ಹೊಡೆದುರುಳಿಸಿದೆ ಎಂದು ನೆತನ್ಯಾಹು ಕಚೇರಿ ಹೇಳಿದೆ.

ಇಸ್ರೇಲ್ ಮತ್ತು ಇರಾನ್ ಮಧ್ಯೆ ಕದನ ವಿರಾಮ ಜಾರಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಯುದ್ಧ ವಿರಾಮ ಘೋಷಣೆಯ ಬೆನ್ನಲ್ಲೇ ಇರಾನ್ ಅದನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್ ಮರು ಯುದ್ಧಕ್ಕೆ ಮುಂದಾಗಿತ್ತು. ಇಂದು ಬೆಳಿಗ್ಗೆ ಇರಾನ್ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿ ಉಡಾವಣೆಯನ್ನು ಪತ್ತೆಹಚ್ಚಲಾಗಿದೆ ಎಂದು ಸೇನೆಯು ಪ್ರಕಟಿಸಿದ ನಂತರ ಈ ನಿರ್ದೇಶನ ನೀಡಲಾಗಿದೆ ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ ಹೇಳಿದ್ದರು.

ಇಸ್ರೇಲ್ ಜೊತೆಗಿನ ಕದನ ವಿರಾಮ ಉಲ್ಲಂಘನೆಗೆ ಇರಾನ್ಗೆ ಬಲವಾಗಿ ಪ್ರತಿಕ್ರಿಯಿಸುವಂತೆ ದೇಶದ ಸೇನೆಗೆ ಆದೇಶಿಸಿರುವುದಾಗಿ ಕಾಟ್ಜ್ ಹೇಳಿದ್ದರು.

ಈ ಮಧ್ಯೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸದಂತೆ ಇಸ್ರೇಲ್ಗೆ ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಕೀತು ಮಾಡಿದ್ದರು. ನೀವು ಈಗ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದರೆ, ಬಹುದೊಡ್ಡ ಯುದ್ಧ ವಿರಾಮ ಉಲ್ಲಂಘನೆಯಾಗಲಿದೆ. ನಿಮ್ಮ ವಿಮಾನಗಳನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಟ್ರಂಪ್ ಸೂಚಿಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಟ್ರಂಪ್ ಜೊತೆ ಮಾತನಾಡಿರುವ ನೆತನ್ಯಾಹು ದಾಳಿ ತಡೆದಿದ್ದಾರೆ.
.ಕದನ ವಿರಾಮ ಜಾರಿಯಲ್ಲಿದೆ, ದಯಮಾಡಿ ಉಲ್ಲಂಘಿಸಬೇಡಿ: ಡೊನಾಲ್ಡ್ ಟ್ರಂಪ್ .ಗಾಜಾ– ಇಸ್ರೇಲ್ ಸಂಘರ್ಷ | ಮೋದಿ ಮೌನ, ಭಾರತದ ನೈತಿಕತೆ ಕುಗ್ಗಿಸಿದೆ: ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.