ವಾಷಿಂಗ್ಟನ್: ಭಾರತ ಮೂಲದ ವಿದ್ಯಾರ್ಥಿನಿ ಸುದಿಕ್ಷಾ ಕೊನಂಕಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಸ್ನೇಹಿತರ ಜೊತೆ ಇರುವ ವಿಡಿಯೊ ಲಭ್ಯವಾಗಿದೆ.

ಡೊಮಿನಿಕನ್ ರಿಪಬ್ಲಿಕ್ ಕಡಲ ತೀರದಲ್ಲಿರುವ ಕ್ಲಬ್ನಲ್ಲಿ ಸುದಿಕ್ಷಾ ಕೊನಂಕಿ ಗೆಳೆಯರ ಜೊತೆ ಇರುವ ವಿಡಿಯೊ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಸುದಿಕ್ಷಾ ಕೊನಂಕಿ ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್ 6ರಂದು ರಜೆ ನಿಮಿತ್ತ ಐವರು ಗೆಳೆಯರ ಜೊತೆ ಕಡಲ ತೀರದ ಡೊಮಿನಿಕನ್ ರಿಪಬ್ಲಿಕ್ಗೆ ಆಗಮಿಸಿದ್ದರು. ಅಂದು ರಾತ್ರಿ ಅವರು ನಾಪತ್ತೆಯಾಗಿದ್ದರು.

ಸುದಿಕ್ಷಾ ನಾಪತ್ತೆಯಾಗಿ 11 ದಿನಗಳು ಕಳೆದಿದ್ದು ಆಕೆಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಸುದಿಕ್ಷಾ ಜೊತೆ ಹೋಗಿದ್ದ ನಾಲ್ವರು ಗೆಳೆಯರ ಪೈಕಿ ಜೋಷುವಾ ರೀಬೆ ಎಂಬ ವ್ಯಕ್ತಿಯನ್ನು ಬಂಧಿಸಿದ್ದು ಆತನ ವಿಚಾರಣೆ ನಡೆಸುತ್ತಿದ್ದಾರೆ.

ಸುದಿಕ್ಷಾ ಮಾರ್ಚ್ 6ರಂದು ಕ್ಲಬ್ವೊಂದರಲ್ಲಿ ಗೆಳೆಯರೊಂದಿಗೆ ಇರುವ ವಿಡಿಯೊ ಪತ್ತೆಯಾಗಿದೆ. ಸುದಿಕ್ಷಾ ತನ್ನ ಗೆಳೆಯರ ಜೊತೆ ಪಾರ್ಟಿ ಮಾಡುತ್ತಿರುವುದು, ಕ್ಲಬ್ ಆವರಣದಲ್ಲಿ ತಿರುಗಾಡುವ ದೃಶ್ಯಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.

ಸುದಿಕ್ಷಾ ಕುಟುಂಬದವರು ಹತ್ಯೆ ಬಗ್ಗೆ ಶಂಕಿಸಿದ್ದಾರೆ. ಆದರೆ ಸ್ಥಳೀಯ ಪೊಲೀಸರು ಸುದಿಕ್ಷಾ ಸಮುದ್ರದಲ್ಲಿ ಮುಳುಗಿರುವ ಸಂದೇಹ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.