ಪ್ರಪಂಚದಾದ್ಯಂತದ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಿದೆ. ಹಲವು ದೇಶಗಳು, ಅದ್ಭುತವಾದ ದೀಪಾಲಂಕಾರ, ಬಾಣ–ಬಿರುಸುಗಳ ಚಿತ್ತಾರದೊಂದಿಗೆ 2025 ಅನ್ನು ಬರಮಾಡಿಕೊಂಡಿವೆ.

ಚೀನಾದಲ್ಲಿ ಡ್ರೋನ್ ಪ್ರದರ್ಶನದ ಮೂಲಕ ಹೊಸ ವರ್ಷವನ್ನು ಸಂಭ್ರಮಿಸಲಾಗಿದೆ. ಬರೋಬ್ಬರಿ 10,000 ಡ್ರೋನ್ಗಳ ಮೂಲಕ ಬಾನಂಗಳದಲ್ಲಿ 'ಡ್ರ್ಯಾಗನ್ ಘರ್ಜಿಸಿದೆ'.

ಶಾಂಘೈನಲ್ಲಿ ನಡೆದಿರುವ ಈ ಡ್ರೋನ್ ಶೋ ವಿಡಿಯೊವನ್ನು ಡೊಟ್ ಒರಿಕ್ರೊನ್ ಎಂಬವರು ಎಕ್ಸ್/ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

ಡಿಸೆಂಬರ್ 31ರ ರಾತ್ರಿ ಹಂಚಿಕೊಂಡಿರುವ ಈ ವಿಡಿಯೊವನ್ನು ಈವರೆಗೆ 48 ಲಕ್ಷ ಜನರು ವೀಕ್ಷಿಸಿದ್ದಾರೆ. 40 ಸಾವಿರಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದು, 5,300 ಟ್ವೀಟಿಗರು ಮರುಹಂಚಿಕೆ ಮಾಡಿಕೊಂಡಿದ್ದಾರೆ.

ವಿಡಿಯೊಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, 'ಚೈನೀಸ್ ಹೊಸ ವರ್ಷ ಜನವರಿ 29ರಂದು ಅಲ್ಲವೇ' ಎಂದು ಪ್ರಶ್ನಿಸಿದ್ದಾರೆ. ಹಲವರು, ವಿಡಿಯೊ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಹೊಸ ವರ್ಷದ ಭಾಷಣದಲ್ಲಿ, ದೇಶದ ಆರ್ಥಿಕ ಸವಾಲುಗಳ ಬಗ್ಗೆ ಮಾತನಾಡಿರುವುದಾಗಿ ಮತ್ತು ತೈವಾನ್ ಅನ್ನು ಚೀನಾದ ಭಾಗ ಎಂದು ಪುನರುಚ್ಚರಿಸಿರುವುದಾಗಿ ಅಲ್ಲಿನ ಸುದ್ದಿವಾಹಿನಿ 'ಸಿಸಿಟಿವಿ' ವರದಿ ಮಾಡಿದೆ.
.ಸಂಪಾದಕೀಯ | ಹೊಸ ವರ್ಷವೆಂದರೆ ಹೊಸ ಭರವಸೆ: ಒಂದಿಷ್ಟು ಮೆಲುಕು, ಕೆಲವು ಮುನ್ನೋಟ.New Year 2025 |ಬೆಂಗಳೂರಲ್ಲಿ ಹೊಸ ವರ್ಷದ ಹೊನಲು: ಖುಷಿಯ ಅಲೆ; ಚಿಮ್ಮಿದ ಶಾಂಪೇನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.