ಸೋಲ್: ಉತ್ತರ ಕೊರಿಯಾವು ಮಂಗಳವಾರ ಕಡಿಮೆ ವ್ಯಾಪ್ತಿಯ ಎರಡು ಗುರುತ್ವಬಲ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಅಮೆರಿಕ ಹಾಗೂ ದಕ್ಷಿಣ ಕೊರಿಯಾವು ಸಮರಾಭ್ಯಾಸ ಪ್ರಾರಂಭಿಸಿದ ಮರುದಿನವೇ ಉತ್ತರ ಕೊರಿಯಾವು ಕ್ಷಿಪಣಿಗಳ ಪರೀಕ್ಷೆ ನಡೆಸಿದೆ.
‘ಜಂಗ್ಯೋನ್ ನಗರದ ಕರಾವಳಿ ಪ್ರದೇಶದಿಂದ ಕ್ಷಿಪಣಿಗಳ ಪರೀಕ್ಷೆ ನಡೆದಿದೆ. ಈ ಕ್ಷಿಪಣಿಗಳು ಉತ್ತರ ಕೊರಿಯಾ ಮೂಲಕ ನಮ್ಮ ದೇಶದ ಪೂರ್ವ ಕರಾವಳಿ ಭಾಗದಲ್ಲಿ ಬಂದು ಬಿದ್ದಿದೆ. ಎರಡೂ ಕ್ಷಿಪಣಿಗಳು ಸುಮಾರು 620 ಕಿ.ಮೀ ಚಲಿಸಿವೆ’ ಎಂದು ದಕ್ಷಿಣ ಕೊರಿಯಾದ ಜಂಟಿ ಸೇನಾ ಮುಖ್ಯಸ್ಥ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಇಲ್ಲಿ ಅಮೆರಿಕದ 28 ಸಾವಿರ ಸೈನಿಕರಿದ್ದಾರೆ. ಇದೊಂದು ‘ಗಂಭೀರ ಪ್ರಚೋದನೆ’ ಎಂದು ತಾನು ಭಾವಿಸಿರುವುದಾಗಿ ದಕ್ಷಿಣ ಕೊರಿಯಾ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.