ಸೋಲ್: ಉತ್ತರ ಕೊರಿಯಾ ಮೊದಲ ಬಾರಿಗೆ ರೈಲಿನಿಂದ ಖಂಡಾಂತರ ಕ್ಷಿಪಣಿಗಳನ್ನು ಗುರುವಾರ ಯಶಸ್ವಿಯಾಗಿ ಉಡಾಯಿಸಿದೆ.

ತನ್ನ ಮಿಲಿಟರಿ ಸಾಮರ್ಥ್ಯ ಪ್ರದರ್ಶನದ ಭಾಗವಾಗಿ ಬುಧವಾರವಷ್ಟೇ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದ ಉತ್ತರ ಕೊರಿಯಾ ಬಲ ಪ್ರದರ್ಶನವನ್ನು ಮುಂದುವರಿಸಿದೆ.

ಇದನ್ನೂ ಓದಿ:ಗುರುತಿಸಲಾಗದ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ: ದಕ್ಷಿಣ ಕೊರಿಯಾ ಸೇನೆ

ಪರ್ವತಗಳ ಮಧ್ಯ ಭಾಗದಲ್ಲಿನ ಗೋಪ್ಯ ಸ್ಥಳದಲ್ಲಿ ರೈಲಿನ ಹಳಿಗಳಿದ್ದು, ಅಲ್ಲಿ ರೈಲಿನ ಮೇಲೆ ನಿರ್ಮಿಸಲಾಗಿರುವ ಲಾಂಚರ್‌ನಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು. 800 ಕಿ.ಮೀ ದೂರದಲ್ಲಿನ ಸಮುದ್ರದ ಗುರಿಯನ್ನು ಈ ಕ್ಷಿಪಣಿ ನಿಖರವಾಗಿ ಹೊಡೆದಿದೆ ಎಂದು ಪಯೋಂಗ್ಯಾಂಗ್‌ನ ಅಧಿಕೃತ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.

ದಟ್ಟವಾದ ಅರಣ್ಯದ ನಡುವಿನ ಹಳಿಗಳ ಮೇಲಿನ ಲಾಂಚರ್‌ನಿಂದ ಎರಡು ವಿಭಿನ್ನ ಕ್ಷಿಪಣಿಗಳು ಹೊರಹೊಮ್ಮುತ್ತಿರುವುದನ್ನು ಸರ್ಕಾರಿ ಮಾಧ್ಯಮ ತೋರಿಸಿದೆ.

ಇದು ಉತ್ತರ ಕೊರಿಯಾವು ತನ್ನ ಉಡಾವಣಾ ವ್ಯವಸ್ಥೆಯನ್ನು ವೈವಿಧ್ಯಗೊಳಿಸುತ್ತಿರುವ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಪ್ರಸ್ತುತ ವಾಹನಗಳು ಮತ್ತು ನೆಲದ ಮೇಲಿನ ಉಡಾವಣಾ ತಾಣಗಳನ್ನು ಉತ್ತರ ಕೊರಿಯಾ ಒಳಗೊಂಡಿದೆ. ಜಲಾಂತರ್ಗಾಮಿಗಳಲ್ಲೂ ಅದು ಈ ವ್ಯವಸ್ಥೆ ಹೊಂದಿರಬಹುದು ಎಂದೂ ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.