ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ಶಸ್ತ್ರಾಸ್ತ್ರ ಉತ್ಪಾದನೆ: ಕಿಮ್‌ ಹೊಸ ವರ್ಷದ ಶಪಥ

Published 31 ಡಿಸೆಂಬರ್ 2023, 16:05 IST
Last Updated 31 ಡಿಸೆಂಬರ್ 2023, 16:05 IST
ಅಕ್ಷರ ಗಾತ್ರ

ಸೋಲ್‌: ಈ ವರ್ಷ (2024) ಹೆಚ್ಚುವರಿ ಮಿಲಿಟರಿ ಬೇಹುಗಾರಿಕಾ ಉಪಗ್ರಗಳನ್ನು ಉಡಾಯಿಸುವುದಾಗಿಯೂ, ಹೆಚ್ಚು ಅಣ್ವಸ್ತ್ರ ತಯಾರಿಸುವುದಾಗಿಯು, ದಾಳಿ ಉದ್ದೇಶದ ಆತ್ಯಾಧುನಿಕ ಡ್ರೋನ್‌ಗಳನ್ನು ಉತ್ಪಾದಿಸುವುದಾಗಿಯೂ ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಶಪಥ ಮಾಡಿದ್ದಾರೆ.

ಈ ಮೂಲಕ ಅಮೆರಿಕ ನೇತೃತ್ವದ ಕೂಟದ ಬೆದರಿಕೆಯನ್ನು ಎದುರಿಸಲು ಯುದ್ಧ ಸನ್ನದ್ಧತೆಗೆ ಅವರು ಕರೆ ನೀಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಭಾನುವಾರ ವರದಿ ಮಾಡಿದೆ.

ಮುಂದಿನ ವರ್ಷಕ್ಕೆ ನಿಗದಿ ಮಾಡಬೇಕಾದ ಗುರಿಯ ಕುರಿತು ಚರ್ಚಿಸಲು ಕರೆಯಲಾಗಿದ್ದ ಆಡಳಿತಾರೂಢ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿರುವ ಕಿಮ್‌, 2024ರ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಶಸ್ತ್ರಾಸ್ತ್ರ ಪರೀಕ್ಷೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ. 

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ಉತ್ತರ ಕೊರಿಯಾದ ಮೇಲಿನ ನಿರ್ಬಂಧಗಳಿಗೆ ಪರಿಹಾರ ಪಡೆಯಬಹುದು ಎಂದು ಕಿಮ್ ನಂಬಿದ್ದಾರೆ. ಆಗ ಅಮೆರಿಕದೊಂದಿಗೆ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆ ಪ್ರಾರಂಭಿಸಲು ದೇಶದ ಪರಮಾಣು ಸಾಮರ್ಥ್ಯವು ತಮಗೆ ಮತ್ತೊಂದು ಅವಕಾಶ ಕಲ್ಪಿಸಿಕೊಡಲಿದೆ ಎಂಬುದು ಕಿಮ್‌ ನಿರೀಕ್ಷೆ ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT