ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ವಲಸೆ ಕೇಂದ್ರಗಳಲ್ಲಿ 100 ಭಾರತೀಯರ ಬಂಧನ

ಅಮೆರಿಕ ನೀತಿ: ಮುಂದುವರಿದ ಗೊಂದಲ,
Last Updated 22 ಜೂನ್ 2018, 14:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ದಕ್ಷಿಣ ಗಡಿಭಾಗದ ಮೂಲಕ ಅಕ್ರಮವಾಗಿ ಪ್ರವೇಶಿಸಿದ ಸುಮಾರು 100 ಮಂದಿ ಭಾರತೀಯರನ್ನು ಅಮೆರಿಕದ ಎರಡುವಲಸೆ ಕೇಂದ್ರಗಳಲ್ಲಿ ಬಂಧನದಲ್ಲಿ ಇರಿಸಲಾಗಿದೆ. ಬಂಧಿತರಲ್ಲಿ ಹೆಚ್ಚಿನವರು ಪಂಜಾಬಿನವರು.

ಅಮೆರಿಕದಲ್ಲಿನ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳು ಎರಡೂ ಕೇಂದ್ರಗಳ ಅಧಿಕಾರಿಗಳ ಜೊತೆಗೆ ಸಂಪರ್ಕ ಸಾಧಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ದಕ್ಷಿಣ ಅಮೆರಿಕದ ನ್ಯೂ ಮೆಕ್ಸಿಕೊ ಪಟ್ಟಣದ ಕೇಂದ್ರವೊಂದರಲ್ಲಿ 40 ರಿಂದ 45 ಮಂದಿ ಬಂಧನದಲ್ಲಿದ್ದಾರೆ. ಅದೇ ರೀತಿ ಒರೆಗಾನ್‌ನಲ್ಲಿ 52 ಮಂದಿಯಿದ್ದು, ಈ ಪೈಕಿಕ್ರೈಸ್ತರು ಹಾಗೂ ಸಿಖ್ಖರೇ ಹೆಚ್ಚಿನವರು.

‘ದೂತಾವಾಸದ ಅಧಿಕಾರಿಗಳು ಈಗಾಗಲೇ ಸಂಪರ್ಕ ಸಾಧಿಸಿದ್ದು, ಅಧಿಕಾರಿಯೊಬ್ಬರು ಒರೆಗಾನ್‌ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಮತ್ತೊಬ್ಬ ಅಧಿಕಾರಿ ನ್ಯೂ ಮೆಕ್ಸಿಕೊಗೆ ತೆರಳಲಿದ್ದಾರೆ. ಪರಿಸ್ಥಿತಿಯ ಬಗ್ಗೆ ನಾವು ಪರಾಮರ್ಶೆ ನಡೆಸುತ್ತಿದ್ದೇವೆ’ ಎಂದು ಭಾರತದ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆಗೊಳಿಸಿದೆ.

‘ಅಕ್ರಮವಾಗಿ ಪ್ರವೇಶಿಸಿದ ಸಾವಿರಾರು ಮಂದಿ ಅಮೆರಿಕದ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದು, ಈ ಪೈಕಿ ಹೆಚ್ಚಿನವರು ಪಂಜಾಬ್‌ಗೆ ಸೇರಿದವರು’ ಎಂದು ಉತ್ತರ ಅಮೆರಿಕದ ಪಂಜಾಬಿ ಒಕ್ಕೂಟದ (ಎನ್‌ಎಪಿಎ) ಮುಖ್ಯಸ್ಥ ಸತ್ನಾಂ ಸಿಂಗ್‌ ತಿಳಿಸಿದ್ದಾರೆ.

2013 ರಿಂದ 2015ರ ತನಕ ಅಮೆರಿಕ ಗಡಿಯೊಳಗೆ 27 ಸಾವಿರ ಮಂದಿ ಭಾರತೀಯರು ಅಕ್ರಮವಾಗಿ ಪ್ರವೇಶಿಸಿದ್ದಾರೆ. ಈ ಪೈಕಿ 4 ಸಾವಿರ ಮಹಿಳೆಯರು ಹಾಗೂ 350 ಮಕ್ಕಳು ಸೇರಿದ್ದಾರೆ ಎಂದುಎನ್‌ಎಪಿಎ ಸಂಘಟನೆಯು ಸರ್ಕಾರದಿಂದ ಪಡೆದ ಮಾಹಿತಿಯನ್ನು ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT