ಇಸ್ಲಾಮಾಬಾದ್: ಪಾಕಿಸ್ತಾನ ಚುನಾವಣಾ ಆಯೋಗ ಮತ್ತು ಅದರ ಮುಖ್ಯಸ್ಥರ ನಿಂದನೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ವಿರುದ್ಧ ದೋಷಾರೋಪ ನಿಗದಿಯನ್ನು ಚುನಾವಣಾ ಆಯೋಗ ಆಗಸ್ಟ್ 2ರ ವರೆಗೆ ಮುಂದೂಡಿದೆ.
ಇಮ್ರಾನ್ ಖಾನ್ ಮಂಗಳವಾರ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗದ ಎದುರು ಹಾಜರಾಗಿದ್ದರು. ಖಾನ್ ಅವರನ್ನು ಬಂಧಿಸುವಂತೆ ಇಸ್ಲಾಮಾಬಾದ್ ಪೊಲೀಸರಿಗೆ ಆಯೋಗ ಸೋಮವಾರ ಸೂಚಿಸಿತ್ತು.
ಇಮ್ರಾನ್ ಖಾನ್, ಅಸಾದ್ ಉಮರ್ ಮತ್ತು ಫವಾದ್ ಚೌಧರಿ ವಿರುದ್ಧ ಚುನಾವಣಾ ಆಯೋಗ ಕಳೆದ ವರ್ಷ ನಿಂದನೆ ಪ್ರಕರಣ ದಾಖಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.