ಇಸ್ಲಾಮಾಬಾದ್ : ಭಾರತದ ತೀವ್ರ ಆಕ್ಷೇಪದ ನಡುವೆಯೂ ಪಾಕಿಸ್ತಾನವು ಗಿಲ್ಗಿಟ್– ಬಾಲ್ಟಿಸ್ತಾನ ಶಾಸನಸಭೆಗೆ ಚುನಾವಣಾ ದಿನಾಂಕ ಘೋಷಿಸಿದೆ. ಅದರಂತೆ ನವೆಂಬರ್ 15ರಂದು ಚುನಾವಣೆ ನಡೆಯಲಿದೆ.

ಪಾಕ್ ಅಧ್ಯಕ್ಷ ಆರಿಫ್ ಅಲ್ವಿ ಅವರು ಚುನಾವಣಾ ದಿನಾಂಕ ನಿಗದಿಪಡಿಸಿ ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ. ಈ ಪ್ರದೇಶಕ್ಕೆ ಹಿಂದೆ ನಿಗದಿಯಾಗಿದ್ದ (ಆಗಸ್ಟ್ 18) ಚುನಾವಣೆಯು, ಕೋವಿಡ್–19 ವ್ಯಾಪಿಸುತ್ತಿದ್ದ ಕಾರಣಕ್ಕೆ ಮುಂದೂಡಲಾಗಿತ್ತು.

ಶಾಸನಸಭೆಯ ಒಟ್ಟು 33 ಸ್ಥಾನಗಳ ಪೈಕಿ 24 ಸ್ಥಾನಗಳಿಗೆ ಚುನಾವಣೆ ನಡೆಯಲಿವೆ. ಆರು ಸ್ಥಾನಗಳು ತಂತ್ರಜ್ಞರಿಗೆ ಮತ್ತು ಮೂರು ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಸದಸ್ಯರ ಅಧಿಕಾರ ಅವಧಿ ಐದು ವರ್ಷ. ಕಳೆದ ಶಾಸನ ಸಭೆಯ ಅವಧಿ ಜೂನ್ 24ಕ್ಕೆ ಕೊನೆಗೊಂಡಿತ್ತು. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಆಡಳಿತ ನಡೆಸಿತ್ತು.

ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪೂರ್ಣ ಪ್ರಮಾಣ ಪ್ರಾಂತ್ಯದ ಸ್ಥಾನಮಾನ ನೀಡುವ ಸಂಬಂಧ ಪಾಕ್‌ನಲ್ಲಿ ಚರ್ಚೆಗಳು ನಡೆಯತ್ತಿರುವ ಬೆನ್ನಲ್ಲೇ ಚುನಾವಣಾ ದಿನಾಂಕ ಘೋಷಿಸಲಾಗಿದೆ.

ಸೆಪ್ಟೆಂಬರ್ 16 ರಂದು ವಿರೋಧ ಪಕ್ಷದ ನಾಯಕರು ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೆದ್ ಬಜ್ವಾ ಅವರ ನಡುವಿನ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಬಂದಿತ್ತು.

‘ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳನ್ನು ಒಳಗೊಂಡಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗ. ಅಕ್ರಮವಾಗಿಆಕ್ರಮಿಸಿಕೊಂಡಿರುವ ಈ ಪ್ರದೇಶಗಳ ಮೇಲೆ ಪಾಕಿಸ್ತಾನ ಸರ್ಕಾರ ಅಥವಾ ಅದರ ನ್ಯಾಯಾಂಗಕ್ಕೆ ಯಾವುದೇ ಅಧಿಕಾರಅಥವಾ ಹಕ್ಕು ಇರುವುದಿಲ್ಲ’ ಎಂದು ಭಾರತ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.