ಇಸ್ಲಾಮಾಬಾದ್: ‘ಸೌದಿ ಅರೇಬಿಯಾ ಹಾಗೂ ಇರಾನ್ ನಡುವೆ ಮಧ್ಯಸ್ಥಿಕೆಯ ಮಾತುಕತೆ ನಡೆಸಿದ್ದೇನೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಮಂಗಳವಾರ ಹೇಳಿದ್ದಾರೆ.

‘ಎರಡೂ ದೇಶಗಳ ನಡುವೆ ಯುದ್ಧ ಆರಂಭವಾದಾಗ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಸಭೆಯಲ್ಲಿ ಪಾಲ್ಗೊಳ್ಳಲು ಸೌದಿ ಅರೇಬಿಯಾದಲ್ಲಿದ್ದೆ. ಉಭಯ ದೇಶಗಳ ವಿದೇಶಾಂಗ ಸಚಿವರೊಂದಿಗೆ ಅಲ್ಲಿಯೇ ಸಂಪರ್ಕ ಸಾಧಿಸಿದ್ದೇನೆ’ ಎಂದು ಅವರು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

‘ಸೌದಿ ಅರೇಬಿಯಾದೊಂದಿಗೆ ನಾವು ಪರಸ್ಪರ ರಕ್ಷಣಾ ಒಪ್ಪಂದ ಹೊಂದಿದ್ದೇವೆ ಎಂದು ನಾನು ಇರಾನಿನ ವಿದೇಶಾಂಗ ಸಚಿವರಿಗೆ ತಿಳಿಸಿದೆ. ಅವರು ನಮ್ಮ ವಿರುದ್ಧ ಸೌದಿಯ ನೆಲ ಬಳಕೆ ಆಗದಂತೆ ನೋಡಿಕೊಳ್ಳಿ ಎಂದು ನನ್ನನ್ನು ಕೇಳಿದರು’ ಎಂದು ಅವರು ಹೇಳಿದರು.

‘ಯುದ್ಧ ಕೊನೆಗಾಣಿಸಲು ಪಾಕಿಸ್ತಾನ ತನ್ನ ಪಾತ್ರವನ್ನು ಸಕ್ರಿಯವಾಗಿ ನಿರ್ವಹಿಸುತ್ತಿದೆ. ನನ್ನ ಮಾತುಕತೆಯ ಬಳಿಕ ಸೌದಿ ಅರೇಬಿಯಾದ ಮೇಲೆ ಯುದ್ಧದ ಕನಿಷ್ಠ ಪರಿಣಾಮವಿದೆ’ ಎಂದು ದಾರ್ ಹೇಳಿದರು.

‘ಯುದ್ಧ ಆರಂಭಗೊಂಡ ನಂತರ ಟರ್ಕಿ, ಬಾಂಗ್ಲಾದೇಶ, ಪ್ಯಾಲೆಸ್ಟೀನ್, ಇರಾನ್, ಉಜ್ಬೇಕಿಸ್ತಾನ್, ಸೌದಿ ಅರೇಬಿಯಾ, ಕತಾರ್, ಒಮಾನ್, ಇರಾಕ್, ಬಹರೇನ್ ಮತ್ತು ಅಜರ್ಬೈಜಾನ್ನ ವಿದೇಶಾಂಗ ಸಚಿವರು, ಅರಬ್ ಸಂಯುಕ್ತ ಸಂಸ್ಥಾನದ ಉಪ ಪ್ರಧಾನಿ ಹಾಗೂ ಐರೋಪ್ಯ ಒಕ್ಕೂಟದ ಉಪಾಧ್ಯಕ್ಷರೊಂದಿಗೂ ದೂರವಾಣಿ ಸಂಭಾಷಣೆ ನಡೆಸಿದ್ದೇನೆ’ ಎಂದು ಅವರು ತಿಳಿಸಿದರು.

ಕೊಲ್ಲಿ ರಾಷ್ಟ್ರಗಳಲ್ಲಿ ಲಕ್ಷಾಂತರ ಪಾಕಿಸ್ತಾನೀಯರಿದ್ದಾರೆ. ಅವರ ರಕ್ಷಣೆ ಹಾಗೂ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನ ಸರ್ಕಾರವು ಆತಿಥೇಯ ದೇಶಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದರು.

ಯುದ್ಧಪೀಡಿತ ದೇಶಗಳಲ್ಲಿರುವ ಪಾಕಿಸ್ತಾನೀಯರನ್ನು ತಾಯ್ನಾಡಿಗೆ ಮರಳಿ ಕರೆತರಲಾಗುತ್ತಿದೆ. ಅಗತ್ಯ ಸಹಾಯ ನೀಡಲಾಗುತ್ತಿದೆ. ಇದಕ್ಕಾಗಿಯೇ 24X7 ಸಹಾಯವಾಣಿ ಆರಂಭಿಸಲಾಗಿದೆ. ಇದುವರೆಗೂ ಇರಾನ್ನಿಂದ 792 ಜನರು ಮರಳಿದ್ದಾರೆ ಎಂದು ದಾರ್ ಮಾಹಿತಿ ನೀಡಿದರು.

ಯುಎಇಯಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ
–ಇಶಾಕ್ ದಾರ್, ವಿದೇಶಾಂಗ ಸಚಿವ ಪಾಕಿಸ್ತಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.