ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನವಿ ಸಲ್ಲಿಸಲು ಜಾಧವ್‌ಗೆ ಅವಕಾಶ: ಕಾಯ್ದೆ ತಿದ್ದುಪಡಿಗೆ ಪಾಕಿಸ್ತಾನ ಚಿಂತನೆ

ಐಸಿಜೆ ಸೂಚನೆ ಮೇರೆಗೆ ಸೇನಾ ಕಾಯ್ದೆ ತಿದ್ದುಪಡಿ ಮಾಡಲು ಪಾಕಿಸ್ತಾನ ಚಿಂತನೆ
Last Updated 13 ನವೆಂಬರ್ 2019, 16:46 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌, ನಾಗರಿಕ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅವಕಾಶವಾಗುವಂತೆ ಸೇನಾ ಕಾಯ್ದೆಯಲ್ಲಿ ತಿದ್ದುಪಡಿ ತರಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಬೇಹುಗಾರಿಕೆ ಆರೋಪದಲ್ಲಿ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ 2017 ಏಪ್ರಿಲ್‌ನಲ್ಲಿಮರಣದಂಡನೆ ಶಿಕ್ಷೆಯನ್ನು ಪಾಕಿಸ್ತಾನ ಸೇನಾ ನ್ಯಾಯಾಲಯ ವಿಧಿಸಿತ್ತು. ಇದನ್ನು ನಿರಾಕರಿಸಿದ್ದ ಭಾರತ, ಜಾಧವ್‌ ನಿವೃತ್ತಿ ಬಳಿಕ ಉದ್ಯಮಿಯಾಗಿದ್ದರು. ಅವರನ್ನು ಇರಾನ್‌ನಿಂದ ಅಪಹರಿಸಲಾಗಿತ್ತು ಎಂದಿತ್ತು.

‘ಅಂತರರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ಷರತ್ತಿನ ಮೇರೆಗೆ ಜಾಧವ್‌ಗೆ ಅರ್ಜಿ ಸಲ್ಲಿಸುವ ಹಕ್ಕನ್ನು ನೀಡಲು ಪಾಕಿಸ್ತಾನ ಕಾನೂನಿನ ತಿದ್ದುಪಡಿ ಮಾಡುತ್ತಿದೆ’ ಎಂದು ಮೂಲಗಳನ್ನು ಉಲ್ಲೇಖಿಸಿ ‘ಆ್ಯರಿ ನ್ಯೂಸ್‌ ಟಿವಿ’ ವರದಿ ಮಾಡಿದೆ. ಸೇನಾ ನ್ಯಾಯಾಲಯದಲ್ಲಿ ಇಂತಹ ಪ್ರಕರಣದಲ್ಲಿ ‘ಶಿಕ್ಷೆ ಪ್ರಶ್ನಿಸಿ ಅರ್ಜಿ’ಸಲ್ಲಿಕೆಅವಕಾಶವನ್ನು ಸೇನಾ ಕಾಯ್ದೆ ನೀಡುವುದಿಲ್ಲ.

ಐಸಿಜೆ ನಿರ್ದೇಶನ
ಜಾಧವ್‌ಗೆ ರಾಜತಾಂತ್ರಿಕ ನೆರವನ್ನು ಪಾಕಿಸ್ತಾನ ನಿರಾಕರಿಸಿದೆ. ಈ ಮೂಲಕರಾಜತಾಂತ್ರಿಕ ಸಂಬಂಧಗಳ ಕುರಿತ 1963ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಎಂದು ಭಾರತ ಐಸಿಜೆಯಲ್ಲಿ ವಾದ ಮಂಡಿಸಿತ್ತು.ಜಾಧವ್‌ ಅವರಿಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಪುನರ್‌ಪರಿಶೀಲಿಸಬೇಕು ಎಂದು ಜುಲೈ 17ರಂದು ಐಸಿಜೆ ಸೂಚಿಸಿತ್ತು. ಐಸಿಜೆ ಸೂಚನೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 2ರಂದು ಜಾಧವ್‌ ಭೇಟಿಯಾಗಲು ಭಾರತದ ಕಾನ್ಸುಲರ್‌ಗೆ ಪಾಕಿಸ್ತಾನ ಅವಕಾಶ ಕಲ್ಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT