ಪೇಶಾವರ: ಭಾರತೀಯ ಸಿನಿಮಾ ರಂಗದ ಖ್ಯಾತ ನಟರಾದ ರಾಜ್‌ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಪೂರ್ವಜರ ಇಲ್ಲಿನ ಮನೆಯನ್ನು ಖರೀದಿಸಲು ಪಾಕಿಸ್ತಾನದ ಖೈಬರ್ ಪಕ್ತುನ್‌ಖ್ವಾ ಸರ್ಕಾರವು ₹2.30 ಕೋಟಿ ಹಣವನ್ನು ಪೇಶಾವರ ಡೆಪ್ಯೂಟಿ ಕಮಿಷನರ್ ಅವರಿಗೆ ನೀಡಿದೆ.

ಸರ್ಕಾರವು ಎರಡೂ ಮನೆಯ ಮಾಲೀಕರಿಗೆ ಕಟ್ಟಡ ಸ್ವಾಧೀನ ಕುರಿತಾಗಿ ಅಂತಿಮ ನೋಟಿಸ್ ಕಳುಹಿಸಿದೆ. ಇದರ ಬೆನ್ನಲ್ಲೇ ಮನೆಗಳ ಖರೀದಿಗಾಗಿ ಪಾಕಿಸ್ತಾನದ ಪುರಾತತ್ವ ಇಲಾಖೆಯು ಹಣವನ್ನು ಹಸ್ತಾಂತರಿಸಿದೆ.

‘ಈ ಎರಡೂ ಕಟ್ಟಡಗಳನ್ನು ಸರ್ಕಾರವು ಆದಷ್ಟು ಬೇಗ ವಶಕ್ಕೆ ಪಡೆಯಲಿದೆ. ಬಳಿಕ ಮನೆಯ ಮೂಲ ವಿನ್ಯಾಸ ಮತ್ತು ಆಕಾರಗಳನ್ನು ಮರು ನಿರ್ಮಿಸುವ ಕಾರ್ಯವನ್ನು ಆರಂಭಿಸಲಿದ್ದೇವೆ’ ಎಂದು ಪುರಾತತ್ವ ಇಲಾಖೆಯ ನಿರ್ದೇಶಕ ಕೆಪಿಕೆ ಅಬ್ದುಸ್ ಸಮಾದ್ ಅವರು ಮಾಹಿತಿ ನೀಡಿದರು.

ಖೈಬರ್ ಪಕ್ತುನ್‌ಖ್ವಾ ಸರ್ಕಾರವು ಈ ಎರಡೂ ಕಟ್ಟಡಗಳನ್ನು ಚಿತ್ರನಟರಿಬ್ಬರ ನೆನಪಿನಲ್ಲಿ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಿದೆ. ರಾಜ್‌ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಮನೆಯನ್ನು 2.30ಕೋಟಿಗೆ ಖರೀದಿಲು ಸರ್ಕಾರವು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.