ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌ ಪ್ರಧಾನಿ ಮೊಹಮ್ಮದ್‌ ಅಶ್ತಯೀ ರಾಜೀನಾಮೆ

Published 26 ಫೆಬ್ರುವರಿ 2024, 10:09 IST
Last Updated 26 ಫೆಬ್ರುವರಿ 2024, 10:09 IST
ಅಕ್ಷರ ಗಾತ್ರ

ರಮಲ್ಲಾ: ಪ್ಯಾಲೆಸ್ಟೀನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಮೊಹಮ್ಮದ್ ಅಶ್ತಯೀ ತಿಳಿಸಿದ್ದಾರೆ. ಅಶ್ತಯೀ ಅವರ ಈ ನಡೆಯು ಪ್ಯಾಲೆಸ್ಟೀನ್ ಪ್ರಾಧಿಕಾರದಲ್ಲಿ ಅಮೆರಿಕ ಬೆಂಬಲಿತ ಸುಧಾರಣಾ ಕ್ರಮಗಳಿಗೆ ಅನುವು ಮಾಡಿಕೊಡಬಹುದು ಎಂದು ನಿರೀಕ್ಷಿಸಲಾಗಿದೆ.

ಅಶ್ತಯೀ ಅವರು ಸೋಮವಾರ ಸಲ್ಲಿಸಿರುವ ರಾಜೀನಾಮೆಯನ್ನು ಒಪ್ಪಬೇಕೋ ಬೇಡವೋ ಎಂಬುದನ್ನು ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ತೀರ್ಮಾನಿಸಬೇಕಿದೆ. ಪಾಶ್ಚಿಮಾತ್ಯ ದೇಶಗಳ ಬೆಂಬಲ ಇರುವ ಪ್ಯಾಲೆಸ್ಟೀನ್‌ ನಾಯಕತ್ವವು, ಪ್ಯಾಲೆಸ್ಟೀನ್ ಪ್ರಾಧಿಕಾರಕ್ಕೆ ಮತ್ತೆ ಚೈತನ್ಯ ತುಂಬಲು ಅಗತ್ಯವಿರುವ ಸುಧಾರಣೆಗಳನ್ನು ತರುವಂತಹ ಬದಲಾವಣೆಗಳಿಗೆ ಸಿದ್ಧವಿದೆ ಎಂಬುದನ್ನು ಅವರ ರಾಜೀನಾಮೆಯು ಸೂಚಿಸುತ್ತಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಕೊನೆಗೊಂಡ ನಂತರದಲ್ಲಿ ಗಾಜಾದಲ್ಲಿ ಆಡಳಿತ ನಡೆಸಲು ಪ್ಯಾಲೆಸ್ಟೀನ್ ಪ್ರಾಧಿಕಾರದಲ್ಲಿ ಸುಧಾರಣೆ ತರಲು ಅಮೆರಿಕ ಬಯಸಿದೆ. ಆದರೆ ಇದನ್ನು ಅನುಷ್ಠಾನಕ್ಕೆ ತರುವಲ್ಲಿ ಹಲವು ಅಡ್ಡಿಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT