ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯಾನಂದನ ‘ಕೈಲಾಸ’ದೊಂದಿಗೆ ಒಪ್ಪಂದ: ಪೆರುಗ್ವೆಯ ಹಿರಿಯ ಅಧಿಕಾರಿ ವಜಾ

Published 1 ಡಿಸೆಂಬರ್ 2023, 13:43 IST
Last Updated 1 ಡಿಸೆಂಬರ್ 2023, 13:43 IST
ಅಕ್ಷರ ಗಾತ್ರ

ಅಸುನ್‌ಸಿಯೋನ್‌ (ಪೆರುಗ್ವೆ): ಅಸ್ತಿತ್ವದಲ್ಲಿಯೇ ಇಲ್ಲದ ದೇಶವಾದ ‘ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸ’ದೊಂದಿಗೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕಾಗಿ ಪೆರುಗ್ವೆ ಹಿರಿಯ ಅಧಿಕಾರಿಯೊಬ್ಬರನ್ನು ವಜಾಗೊಳಿಸಲಾಗಿದೆ.

‘ದಕ್ಷಿಣ ಅಮೆರಿಕದ ದ್ವೀಪರಾಷ್ಟ್ರ’ ಎಂದು ಪರಿಚಯಿಸಿಕೊಂಡ ‘ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸ’ ದೇಶದ ಅಧಿಕಾರಿಗಳೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದ್ದರಿಂದ ತಮ್ಮನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ’ ಎಂದು ಕೃಷಿ ಸಚಿವರ ಮುಖ್ಯ ಅಧಿಕಾರಿ ಅರ್ನಾಲ್ಡೊ ಚಾಮೊರ್ರೊ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಪೆರುಗ್ವೆಗೆ ಸಹಾಯ ಮಾಡುವುದಾಗಿ ಅವರು (ಅಧಿಕಾರಿಗಳು) ತಿಳಿಸಿದರು. ಹಲವು ಯೋಜನೆಗಳನ್ನು ನಮ್ಮ ಮುಂದಿಟ್ಟರು. ನಕಲಿ ಅಧಿಕಾರಿಗಳು ಸಚಿವ ಕಾರ್ಲೋಸ್‌ ಜಿಮಿನೆಝ್‌ ಅವರನ್ನು ಭೇಟಿಯಾಗಿದ್ದರು’ ಎಂದೂ ಹೇಳಿದರು.

ಒಪ್ಪಂದದ ಪತ್ರವು ಸಚಿವಾಲಯದ ಅಧಿಕೃತ ಮದ್ರೆಯನ್ನು ಒಳಗೊಂಡಿದ್ದು, ಅದರಲ್ಲಿ  ‘ದೇಶದ ಸಾರ್ವಭೌಮರಾದ ಗೌರವಾನ್ವಿತ ನಿತ್ಯಾನಂದ ಪರಮಶಿವಂ’ ಹಾಗೂ ‘ಹಿಂದೂ ಧರ್ಮ, ಮಾನವೀಯತೆ, ಪೆರುಗ್ವೆ ದೇಶಕ್ಕೆ ನಿಮ್ಮ ಕೊಡುಗೆ ಅಪಾರ’ ಎಂದು ಚಾಮೊರ್ರೊ ಶ್ಲಾಘಿಸಿದ್ದಾರೆ. 

‘ನಿತ್ಯಾನಂದ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಅವರಿಗಾಗಿ ಹುಡುಕಾಟ ನಡೆಸುತ್ತಿದೆ’ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ ಒಪ್ಪಂದವನ್ನು ಅಧಿಕೃತ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೃಷಿ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT