ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಟೂನ್‌ ಪಾತ್ರಗಳಿಗೆ ಜೀವತುಂಬಿದ ಹಾಂಗ್‌ಕಾಂಗ್‌ ರ‍್ಯಾಲಿ

Last Updated 8 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌:ಇಲ್ಲಿ ನಡೆಯುತ್ತಿರುವ ಸಾರ್ವಜನಿಕ ಪ್ರತಿಭಟನೆ ಭಾನುವಾರಹೊಸರೂಪ ಪಡೆಯಿತು. ನೂರಾರು ಹೋರಾಟಗಾರರು ಕಾರ್ಟೂನ್‌ ಪಾತ್ರಗಳ ಮುಖವಾಡಗಳನ್ನು ಧರಿಸಿ ರ‍್ಯಾಲಿ ನಡೆಸಿದರು.

ಈ ಹೋರಾಟದ ಸಿದ್ಧತೆಗೆ ವೇದಿಕೆಯಾಗಿರುವ ಎಲ್‌ಐಎಚ್‌ಕೆಜಿ ಎಂಬ ವೆಬ್‌ಸೈಟ್‌ನಲ್ಲಿ ವ್ಯವಸ್ಥೆಯ ವಿರುದ್ಧದ ಆಕ್ರೋಶವನ್ನು ಪ್ರತಿಭಟನಕಾರರು ಮೀಮ್‌ ಮತ್ತು ಪ್ರಾಣಿಗಳ ಕಾರ್ಟೂನ್‌ ಪಾತ್ರಗಳ ಮೂಲಕ ವ್ಯಕ್ತಪಡಿಸುತ್ತಾರೆ. ಈ ಮೀಮ್‌ಗಳಿಗೆ ಜೀವ ತುಂಬಲು ವರ್ಣರಂಜಿತವಾದ ಹಂದಿ, ಕಪ್ಪೆ ಮತ್ತುಶೀಬಾ ಇನು ತಳಿ ನಾಯಿಯ ಮುಖವಾಡವನ್ನು ಭಾನುವಾರ ಪ್ರತಿಭಟನಕಾರರು ಧರಿಸಿದ್ದರು.

ಹಾಂಗ್ ಕಾಂಗ್‌ನ ಪ್ರಜಾಪ್ರಭುತ್ವ ಪರ ಆಂದೋಲನಕ್ಕೆ ನಾಯಕರಿಲ್ಲ. ಇದು ಆನ್‌ಲೈನ್‌ ವೇದಿಕೆಗಳ ಮೂಲಕ ಸಂಘಟಿತವಾಗಿದೆ.

ಸಿಂಗ್‌ ಜೈ ಎಂಬ ಪ್ರಜಾಪ್ರಭುತ್ವ ಪರ ಆನ್‌ಲೈನ್‌ ರೇಡಿಯೊ ಸ್ಟೇಷನ್‌ ಆರಂಭಿಸಿರುವ ಸಿಮಾನ್‌ ಲಾ ಈ ಹೋರಾಟದ ರೂವಾರಿ.

ಪ್ರತಿ ಮುಖವಾಡದ ಹಿಂದೆ ಹಾಂಗ್‌ ಕಾಂಗ್‌ ಜನರು ಎದುರಿಸುತ್ತಿರುವ ನೋವಿದೆ. ಹತ್ತು ದಿನಗಳಲ್ಲಿ 117 ಮುಖವಾಡಗಳನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.

‘ಪೊಲೀಸರ ದೌರ್ಜನ್ಯ ಮತ್ತು ದಬ್ಬಾಳಿಕೆಯ ನಡುವೆಯೂ ಹಾಂಗ್ ಕಾಂಗ್ ಜನರು ಹಾಸ್ಯ, ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೊಂದಿಗೆ ಮುಂದುವರಿಯಬೇಕೆಂದು ಬಯಸುವುದಾಗಿ’ ಎಂದು ಅವರು ಹೇಳಿದರು.

ಆರು ತಿಂಗಳು ಪೂರೈಸಿದ ಪ್ರಜಾಪ್ರಭುತ್ವ ಪರ ಹೋರಾಟ

ಆಡಳಿತ ವಿರೋಧಿ ನೀತಿ ಖಂಡಿಸಿ ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿರುವ ಹೋರಾಟ ಆರು ತಿಂಗಳು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಹೋರಾಟಗಾರರು ಬೃಹತ್‌ ರ‍್ಯಾಲಿ ಆಯೋಜಸಿದ್ದರು.

ರಾಜಕೀಯ ಬಿಕ್ಕಟ್ಟು ಶಮನಕ್ಕೆ ಕೊನೆಯ ಅವಕಾಶ ನೀಡಿದ್ದೇವೆ ಎಂದುಬೀಜಿಂಗ್‌ ಬೆಂಬಲಿತ ಮುಖಂಡರಿಗೆ ಇದೇ ವೇಳೆ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

‘ನಾವು ನಮ್ಮ ಅಭಿಪ್ರಾಯಗಳನ್ನು ಯಾವುದೇ ರೂಪದಲ್ಲಿ ವ್ಯಕ್ತಪಡಿಸಿದರೂ, ಸರ್ಕಾರ ಆಲಿಸುವುದಿಲ್ಲ. ಅದು ಚೀನದ ಕಮ್ಯುನಿಸ್ಟ್‌ ಪಕ್ಷದ ಆದೇಶವನ್ನು ಮಾತ್ರವೇ ಅನುಸರಿಸುತ್ತದೆ ಎಂದು’ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT