ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಸಂಗೀತ ವಾದ್ಯ ಸಿತಾರ್ ನ ಶ್ರೀಗಂಧದ ಪ್ರತಿಕೃತಿ ಹಾಗೂ ಅವರ ಪತ್ನಿ ಬ್ರಿಗಿಟಿ ಮ್ಯಾಕ್ರನ್ ಗೆ ಪೊಚಂಪಲ್ಲಿ ಸಿಲ್ಕ್ ಇಕ್ಕತ್ ಸೀರೆಯನ್ನು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ಉಡುಗೊರೆಯಾಗಿ ನೀಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.