ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿಯವರು ಮಾರಿಷಸ್ ಅಧ್ಯಕ್ಷ ಧರಮ್ ಗೋಖುಲ್ ಅವರನ್ನು ಭೇಟಿಯಾಗಿ ಮಹಾಕುಂಭ ಮೇಳದ ಗಂಗಾಜಲವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಮಂಗಳವಾರ ಬೆಳಿಗ್ಗೆ ಮಾರಿಷಸ್ ತಲುಪಿದ್ದಾರೆ. ಗಂಗಾಜಲದ ಜತೆಗೆ ಗೋಖುಲ್ ಅವರಿಗೆ ಇನ್ನು ಹಲವು ಉಡುಗೊರೆಗಳನ್ನು ನೀಡಿದ್ದಾರೆ.

ಇದಕ್ಕೂ ಮೊದಲು ಮಾರಿಷಸ್ ಪ್ರಧಾನಿ ನವಿನ್ಚಂದ್ರ ರಾಮ್ಗೋಲಮ್ ಅವರನ್ನು ಭೇಟಿಯಾಗಿದ್ದರು. ಉಭಯ ದೇಶಗಳ ನಾಯಕರು ಬೋಟಾನಿಕಲ್ ಗಾರ್ಡನ್ಗೆ ತೆರಳಿ ಮಾರಿಷಸ್ ನಾಯಕರ ಸಮಾಧಿಗೆ ನಮನ ಸಲ್ಲಿಸಿದರು.

ವಿಮಾನ ನಿಲ್ದಾಣದಲ್ಲಿ ಮೋದಿ ಬಂದಿಳಿಯುತ್ತಿದ್ದಂತೆ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಈ ಹಿಂದೆ 2015ರಲ್ಲಿ ಮೋದಿ ಅವರು ಮಾರಿಷಸ್ಗೆ ಭೇಟಿ ನೀಡಿದ್ದರು.
.VIDEO | ಮಾರಿಷಸ್ ಪ್ರವಾಸ: ಭೋಜ್ಪುರಿಯ 'ಗೀತ್ ಗವಾಯಿ' ಮೂಲಕ ಮೋದಿಗೆ ಸ್ವಾಗತ.ಮಾರಿಷಸ್ಗೆ ಮೋದಿ: ಭಾರತ ಅನುದಾನಿತ 20ಕ್ಕೂ ಅಧಿಕ ಯೋಜನೆಗಳಿಗೆ ಪ್ರಧಾನಿ ಚಾಲನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.