ಲಂಡನ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಕೊರೊನಾ ವೈರಸ್‌ಗೆ ತಾನು ಸಿದ್ಧಪಡಿಸುತ್ತಿರುವ ಸಂಭಾವ್ಯ ಲಸಿಕೆಯ ಆರಂಭಿಕ ಪ್ರಯೋಗಗಳ ಕುರಿತ ಸಕಾರಾತ್ಮಕ ಸಂಗತಿಯೊಂದನ್ನು ಗುರುವಾರ ಬಹಿರಂಗಪಡಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕೋವಿಡ್ಗೆ ಭಾರತದ ಮೊದಲ ಲಸಿಕೆ ಕೋವಾಕ್ಸಿನ್: ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ರಿಟನ್‌ನ ‘ಐಟಿವಿ’ ವಾಹಿನಿಯ ರಾಜಕೀಯ ವಿಭಾಗದ ಸಂಪಾದಕ ರಾಬರ್ಟ್ ಪೆಟ್ಸೋನ್, ‘ಲಿಸಿಕೆ ಕುರಿತು ಒಳ್ಳೆ ಸುದ್ದಿಯೊಂದುಹೊರಬೀಳಲಿದೆ ಎಂದು ಬರೆದುಕೊಂಡಿದ್ದಾರೆ. ಅವರ ಬರಹ ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ಈ ವಿಷಯವನ್ನುವರದಿ ಮಾಡಿದೆ.

18 ವರ್ಷಕ್ಕಿಂತ ಮೇಲ್ಪಟ್ಟವರ ಜನರಲ್ಲಿ ಈ ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಣಯಿಸಲು ವಿಶ್ವವಿದ್ಯಾಲಯವು ಲಸಿಕೆಯ ಮೂರನೇ ಹಂತದ ಹ್ಯೂಮನ್ ಟ್ರಯಲ್ (ಮಾನವರ ಮೇಲಿನ ಪ್ರಯೋಗ) ಪ್ರಾರಂಭಿಸಿದೆ. ಆದರೆ ಈ ಲಸಿಕೆಯ ಒಂದನೇ ಹಂತದ ಪ್ರಯೋಗದ ಫಲಿತಾಂಶಗಳು ಇನ್ನೂ ಬಹಿರಂಗವಾಗಿಲ್ಲ.

ಇದನ್ನೂ ಓದಿ: ಕೋವಿಡ್ ಲಸಿಕೆ: ಸಾರ್ವಜನಿಕ ಬಳಕೆಗೆ ಆಗಸ್ಟ್ 15ರ ಗುರಿ

‘ಈ ವರೆಗಿನ ಪ್ರಯೋಗಗಳಲ್ಲಿ ನಾವು ಕಂಡಿರುವ ಪ್ರತಿರೋಧಕ ಪ್ರತಿಕ್ರಿಯೆಯು ಲಸಿಕೆ ತಯಾರಿಸುವ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹದಾಯಕವಾಗಿದೆ,’ ಎಂದು ಈ ತಿಂಗಳ ಆರಂಭದಲ್ಲಿ ವಿಜ್ಞಾನಿಗಳ ತಂಡ ಹೇಳಿಕೊಂಡಿತ್ತು.

‘ಆಸ್ಟ್ರಾಜೆನೆಕಾ ಔಷಧ ಸಂಸ್ಥೆ ತಯಾರಿಸುತ್ತಿರುವ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಂಶೋಧಿಸುತ್ತಿರುವ ಕೋವಿಡ್ -19 ಲಸಿಕೆಯ ಆರಂಭಿಕ ಪ್ರಯೋಗಗಳ ಕುರಿತು ಶೀಘ್ರದಲ್ಲೇ (ಬಹುಶಃ ನಾಳೆ) ಸಕಾರಾತ್ಮಕ ಸುದ್ದಿ ಬರಲಿದೆ ಎಂದು ನನಗೆ ಕೇಳಿಬಂದಿದೆ’ ಎಂದು ಪೆಸ್ಟನ್ ಬುಧವಾರ ತಮ್ಮ ಬ್ಲಾಗ್‌ನಲ್ಲಿಪ್ರಕಟಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ಲಸಿಕೆ ಪ್ರಯೋಗ ಯಶಸ್ವಿ: ಅಂತಿಮ ಪರೀಕ್ಷೆಗೆ ಸಿದ್ಧತೆ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ತಾನು ಸಂಶೋಧಿಸುತ್ತಿರುವ ಲಸಿಕೆಯನ್ನು ತಯಾರಿಸಲು ಅಸ್ಟ್ರಾಜೆನೆಕಾ ಎಂಬ ಔಷಧ ಸಂಸ್ಥೆಗೆ ಪರವಾನಗಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.