ವೆಲ್ಲಿಂಗ್ಟನ್: ಗುರುವಾರ ರಾತ್ರಿ ನ್ಯೂಜಿಲೆಂಡ್ನ ಈಶಾನ್ಯ ಕರಾವಳಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸದ್ಯಕ್ಕೆ ಯಾವುದೇ ಗಂಭೀರ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಗಳು ಬಂದಿಲ್ಲ.

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.3 ದಾಖಲಾಗಿದ್ದು, ದೇಶದ ಉತ್ತರ ದ್ವೀಪದ ಪೂರ್ವ ಭಾಗದಲ್ಲಿ ಸುನಾಮಿ ಅಪಾಯವಿದೆ ಎಂದು ನ್ಯೂಜಿಲೆಂಡ್ನ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆ ಎಚ್ಚರಿಸಿದೆ.

ಅಮೆರಿಕದ ಸುನಾಮಿ ಮುನ್ಯೂಚನೆ ವ್ಯವಸ್ಥೆಯು 0.3 ರಿಂದ 1 ಮೀಟರ್ (1 ರಿಂದ 3.3 ಅಡಿ) ಅಲೆಗಳು ಏಳಬಹುದು ಎಂದು ಹೇಳಿತ್ತಾದರೂ ನಂತರ ಅಪಾಯವಿಲ್ಲ ಎಂದು ಹೇಳಿದೆ.

ಗಿಸ್ಬೋರ್ನ್ ನಗರದ ಈಶಾನ್ಯಕ್ಕೆ ಸುಮಾರು 174 ಕಿಲೋಮೀಟರ್ (108 ಮೈಲಿ) ದೂರದಲ್ಲಿ ಸಮುದ್ರದ 20.8 ಕಿಲೋಮೀಟರ್ (13 ಮೈಲಿ) ಆಳದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಗಿಸ್ಬೋರ್ನ್ ನಿವಾಸಿಗಳು ಕೊಂಚ ಅಲುಗಾಡಿದ ಅನುಭವವಾದ ಬಗ್ಗೆ ಹೇಳಿಕೊಂಡಿದ್ದಾರೆ.

2011 ರಲ್ಲಿ ಕ್ರೈಸ್ಟ್ಚರ್ಚ್ ನಗರದಲ್ಲಿ ಸಂಭವಿಸಿದ್ದ 6.3 ತೀವ್ರತೆಯ ಭೂಕಂಪನ 185 ಜನರನ್ನು ಬಲಿ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.