ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಗ್‌ನಲ್ಲಿ ಭೀಕರ ಗುಂಡಿನ ದಾಳಿ: ತಂದೆಯನ್ನೂ ಕೊಂದು ಬಂದಿದ್ದ ಹಂತಕ!

ಪ್ರೇಗ್‌ನ ಚಾರ್ಲ್ಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಯಿಂದ ಮಾರಣಹೋಮ: ಮೃತರ ಸಂಖ್ಯೆ 14ಕ್ಕೆ ಏರಿಕೆ
Published 22 ಡಿಸೆಂಬರ್ 2023, 14:09 IST
Last Updated 22 ಡಿಸೆಂಬರ್ 2023, 14:09 IST
ಅಕ್ಷರ ಗಾತ್ರ

ಪ್ರೇಗ್: ಜೆಕ್ ಗಣರಾಜ್ಯದ ರಾಜಧಾನಿ ಪ್ರೇಗ್‌ನ ಚಾರ್ಲ್ಸ್‌ ವಿಶ್ವವಿದ್ಯಾಲಯದಲ್ಲಿ ಬಂದೂಕುಧಾರಿಯೊಬ್ಬ ಗುರುವಾರ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

'ಹಲವರನ್ನು ಕೊಂದ ಹಂತಕ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ದಾಳಿಯಲ್ಲಿ ಮೃತರಾದವರೆಲ್ಲ ಸ್ಥಳೀಯ ವಿದ್ಯಾರ್ಥಿಗಳು' ಎಂದು ಪ್ರೇಗ್‌ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

'ಪ್ರೇಗ್‌ ಹೊರವಲಯದ ಮನೆಯೊಂದರಲ್ಲಿ ವಾಸಿಸುತ್ತಿದ್ದ ಹಂತಕ 21 ವರ್ಷದವನಾಗಿದ್ದು, ಇದೇ ವಿಶ್ವವಿದ್ಯಾಯಲಯ ಹಳೇ ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ. ಆತನ ಮನೆಗೆ ಹೋಗಿ ಶೋಧಿಸಿದಾಗ ತನ್ನ ತಂದೆಯನ್ನೂ ಗುಂಡಿಟ್ಟು ಕೊಂದು ವಿಶ್ವವಿದ್ಯಾಲಯಕ್ಕೆ ಬಂದಿದ್ದ. ಅಲ್ಲದೇ ಮನೆಯಲ್ಲಿ ಭಾರಿ ಶಸ್ತ್ರಾಸ್ತ್ರ ಕಂಡು ಬಂದಿವೆ. ಹಂತಕನ ಉದ್ದೇಶ ಏನಾಗಿತ್ತು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ' ಎಂದು ತಿಳಿಸಿದ್ದಾರೆ.

'ಹಂತಕ ಮಾನಸಿಕ ರೋಗದಿಂದ ಬಳಲುತ್ತಿದ್ದ. ದಾಳಿಯು ಯಾವುದೇ ಅಂತರರಾಷ್ಟ್ರೀಯ ಉಗ್ರವಾದಕ್ಕೆ ಸಂಬಂಧಿಸಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಜನ್ ಪಲಾಚ್ ಚೌಕದಲ್ಲಿರುವ ಚಾರ್ಲ್ಸ್ ವಿಶ್ವವಿದ್ಯಾಲಯದಲ್ಲಿ ಈ ಗುಂಡಿನ ದಾಳಿ ನಡೆದಿತ್ತು. ಜೆಕ್ ಗಣರಾಜ್ಯದ ಇತಿಹಾಸದಲ್ಲಿಯೇ ಇದು ಅತ್ಯಂತ ಭೀಕರ ದಾಳಿ ಎಂದು ಹೇಳಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಜೆಕ್ ಗಣರಾಜ್ಯದಾದ್ಯಂತ ಒಂದು ದಿನ ಶೋಕಾಚರಣೆ ಘೋಷಿಸಲಾಗಿದೆ. ಇಂತಹ ಭಯಾನಕ ದಾಳಿಗೆ ಯಾವುದೇ ಸಮರ್ಥನೆ ಇಲ್ಲವೇ ಇಲ್ಲ ಎಂದು ಪ್ರಧಾನಿ ಪೀಟರ್‌ ಫಿಯಾಲ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT