ಸುವ(ಫಿಜಿ): ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಂಗಳವಾರ ಫಿಜಿಯ ಅತ್ಯುನ್ನತ ನಾಗರಿಕ ಪುರಸ್ಕಾರ ‘ಕಂಪ್ಯಾನಿಯನ್ ಆರ್ಡರ್ ಆಫ್ ಫಿಜಿ’ ನೀಡಿ ಗೌರವಿಸಲಾಯಿತು.
ಈ ವೇಳೆ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಶ್ಲಾಘಿಸಿದ ದ್ರೌಪದಿ ಮುರ್ಮು, ಫಿಜಿಯನ್ನು ಹೆಚ್ಚು ಸಮೃದ್ಧ ರಾಷ್ಟ್ರವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಪಾಲುದಾರಿಕೆಗೆ ಭಾರತವು ಸಿದ್ಧವಾಗಿದೆ ಎಂದು ತಿಳಿಸಿದರು.
‘ಫಿಜಿಯ ಅಧ್ಯಕ್ಷ ರತು ವಿಲಿಯಮ್ ಮೈವಿಲ್ಲಿ ಕಟೋನಿವಿರೆ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಇದು ಫಿಜಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ’ ಎಂದು ರಾಷ್ಟ್ರಪತಿಗಳ ಕಚೇರಿಯು ‘ಎಕ್ಸ್’ನಲ್ಲಿ ತಿಳಿಸಿದೆ.
ಫಿಜಿಗೆ ಎರಡು ದಿನಗಳ ಭೇಟಿಯು ಎರಡು ರಾಷ್ಟ್ರಗಳ ನಡುವಿನ ಅತ್ಯುನ್ನತ ಸ್ನೇಹ ಸಂಬಂಧ ದ್ಯೋತಕವಾಗಿದೆ ಎಂದು ಮುರ್ಮು ಬಣ್ಣಿಸಿದರು. ಫಿಜಿಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಖ್ಯಾತಿಗೂ ಮುರ್ಮು ಪಾತ್ರರಾದರು.
ಇದಾದ ಬಳಿಕ ಫಿಜಿಯ ಸಂಸತ್ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿದರು.
President Ratu Wiliame Maivalili Katonivere of Fiji conferred the Companion of the Order of Fiji upon President Droupadi Murmu. This is the highest civilian award of Fiji. President Murmu said that this honour is a reflection of the deep ties of friendship between India and Fiji. pic.twitter.com/6xWcykOI71
— President of India (@rashtrapatibhvn) August 6, 2024
Despite the vast difference in our size, both India and Fiji have much in common, including our vibrant democracies. Almost 10 years ago, speaking in this same Hall, Prime Minister of India Shri Narendra Modi had underlined some basic values that unite India and Fiji.
— President of India (@rashtrapatibhvn) August 6, 2024
These… pic.twitter.com/W5ea01nvwW
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.