ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video| ರಾಣಿ ಎಲಿಜಬೆತ್‌ಗೆ ಗೌರವ ಅರ್ಪಿಸಿದ ರಾಷ್ಟ್ರಪತಿ: ಸಂತಾಪ ಪುಸ್ತಕಕ್ಕೆ ಸಹಿ

Last Updated 18 ಸೆಪ್ಟೆಂಬರ್ 2022, 14:47 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ರಾಣಿ 2ನೇ ಎಲಿಜಬೆತ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿರುವ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಹಾಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಭೇಟಿ ನೀಡಿದರು.

ಮುರ್ಮು ಅವರು ತಮ್ಮ ಪರವಾಗಿ ಮತ್ತು ಭಾರತದ ನಾಗರಿಕರ ಪರವಾಗಿ ರಾಣಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

ರಾಣಿಯವರ ಸ್ಮರಣೆಗಾಗಿ ಲಂಡನ್‌ನ ಲ್ಯಾಂಕಾಸ್ಟರ್‌ ಹೌಸ್‌ನಲ್ಲಿ ಇರಿಸಲಾಗಿರುವ ಸಂತಾಪ ಸೂಚಕ ಪುಸ್ತಕಕ್ಕೂ ರಾಷ್ಟ್ರಪತಿಯವರು ಸಹಿ ಹಾಕಿದರು.

ಬ್ರಿಟನ್‌ನ ರಾಣಿ, 96 ವರ್ಷ ವಯಸ್ಸಿನ 2ನೇ ಎಲಿಜಬೆತ್ ಸೆ.8ರ ರಾತ್ರಿ ನಿಧನರಾದರು. ಬ್ರಿಟಿಷ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ ಅವರದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT