ಲಂಡನ್ (ಎ.ಪಿ): ರಾಜಕುಮಾರಿ ಡಯಾನಾ ಅವರು ಬಳಸುತ್ತಿದ್ದ, ಕುರಿಯ ಉಣ್ಣೆಯನ್ನು ಬಳಸಿ ತಯಾರಿಸಲಾಗಿದ್ದ ಕೆಂಪು ಬಣ್ಣದ ಸ್ವೆಟರ್ ಹರಾಜಿನಲ್ಲಿ ದಾಖಲೆಯ ₹ 9.14 ಕೋಟಿಗೆ (1.1 ಮಿಲಿಯನ್ ಡಾಲರ್) ಮಾರಾಟವಾಗಿದೆ.
ಆನ್‌ಲೈನ್ ಮೂಲಕ ನಡೆದ ಸೂತ್‌ಬೈ ಫ್ಯಾಷನ್ ಐಕನ್ ಮಾರಾಟದಲ್ಲಿ ಅಪರಿಚಿತ ಬಿಡ್‌ದಾರರು ಈ ಸ್ವೆಟರ್ ಅನ್ನು ಖರೀದಿಸಿದ್ದಾರೆ. ಎರಡು ವಾರ ನಡೆದ ಹರಾಜು ಪ್ರಕ್ರಿಯೆಯು ಗುರುವಾರ ಅಂತ್ಯಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.