ಸರ್ರೆ(ಕೆನಡಾ): ಹಾಸ್ಯ ನಟ ಕಪಿಲ್ ಶರ್ಮಾ ಅವರು ಕೆನಡಾದ ಸರ್ರೆ ನಗರದಲ್ಲಿ ಹೊಸದಾಗಿ ಆರಂಭಿಸಿರುವ ‘ಕ್ಯಾಪ್ಸ್ ಕೆಫೆ’ ರೆಸ್ಟೋರೆಂಟ್ ಮೇಲೆ ದುಷ್ಕರ್ಮಿಗಳು ಗುರುವಾರ ಗುಂಡಿನ ದಾಳಿ ನಡೆಸಿದ್ದಾರೆ.

ಈ ದಾಳಿ ನಡೆಯುವಾಗ ಕೆಫೆಯ ಸಿಬ್ಬಂದಿ ಒಳಗೇ ಇದ್ದರು. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ ಮತ್ತು ಯಾರೊಬ್ಬರಿಗೂ ಗಾಯಗಳಾಗಿಲ್ಲ. ಆದರೆ ಕೆಫೆಗೆ ಹಾನಿಯಾಗಿದೆ ಎಂದು ಸುರ್ರೆ ನಗರದ ಪೊಲೀಸರು ತಿಳಿಸಿದ್ದಾರೆ.

‘ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಗುರುವಾರ ರಾತ್ರಿ 1.50 ಗಂಟೆಗೆ ರೆಸ್ಟೋರೆಂಟ್ನಿಂದ ಕರೆ ಬಂದಿತು. ಕೂಡಲೇ ಅಲ್ಲಿಗೆ ತೆರಳಿ ಪರಿಶೀಲಿಸಿದೆವು. ಸಿಬ್ಬಂದಿ ಕೆಫೆಯೊಳಗೆ ಇರುವಾಗಲೇ ಗುಂಡಿನ ದಾಳಿ ನಡೆದಿದೆ. ಆಸ್ತಿಗೆ ಹಾನಿಯಾಗಿದೆ’ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಕುರಿತು ತನಿಖೆ ಕೈಗೊಳ್ಳಲಾಗಿದ್ದು, ಇತರ ಘಟನೆಗಳೊಂದಿಗಿನ ಸಂಬಂಧವನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಈ ಕೃತ್ಯಕ್ಕೆ ಕಾರಣ ಮತ್ತು ಉದ್ದೇಶವನ್ನು ತಿಳಿದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಸರ್ರೆಯಲ್ಲಿ ಜುಲೈ 4ರಂದು ಈ ಕೆಫೆಯನ್ನು ತೆರೆಯಲಾಯಿತು.

ಆಘಾತ ತರಿಸಿದೆ– ಕೆಫೆ: ಈ ಘಟನೆಯು ಆಘಾತ ತರಿಸಿದೆ ಎಂದು ಪ್ರತಿಕ್ರಿಯಿಸಿರುವ ‘ಕ್ಯಾಪ್ಸ್ ಕೆಫೆ’ ಹಿಂಸಾಚಾರದ ವಿರುದ್ಧ ದೃಢವಾಗಿ ನಿಲ್ಲುವುದಾಗಿ ‘ಇನ್ಸ್ಟಾಗ್ರಾಮ್’ ಪೋಸ್ಟ್ನಲ್ಲಿ ತಿಳಿಸಿದೆ.

‘ರಚಿಕರವಾದ ಕಾಫಿ ಮತ್ತು ಸ್ನೇಹಮಯ ಸಂಭಾಷಣೆ ಮೂಲಕ ಜನರಿಗೆ ಸಂತೋಷವನ್ನು ತರುವ ಭರವಸೆಯೊಂದಿಗೆ ಕ್ಯಾಪ್ಸ್ ಕೆಫೆಯನ್ನು ತೆರೆದಿದ್ದೇವೆ. ಆ ಕನಸಿಗೆ ಪೆಟ್ಟು ಬಿದ್ದರೆ ಸಹಿಸುವುದಿಲ್ಲ. ನಾವು ಮತ್ತೆ ಎದ್ದು ನಿಲ್ಲುತ್ತೇವೆ. ಯಾವುದಕ್ಕೂ ಭಯ ಪಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದೆ.
.ಕೆನಡಾದಲ್ಲಿರುವ ಕಪಿಲ್ ಶರ್ಮಾ ಕೆಫೆ ಮೇಲೆ ಖಾಲಿಸ್ತಾನಿ ಉಗ್ರನಿಂದ ಗುಂಡಿನ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.