ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಗೆ ಸಂಧಾನ

Published 9 ಅಕ್ಟೋಬರ್ 2023, 16:59 IST
Last Updated 9 ಅಕ್ಟೋಬರ್ 2023, 16:59 IST
ಅಕ್ಷರ ಗಾತ್ರ

ದೋಹಾ/ಗಾಜಾ: ಇಸ್ರೇಲ್ ಜೈಲುಗಳಿಂದ 36 ಮಂದಿ ಪ್ಯಾಲೆಸ್ಟೀನ್ ಮಹಿಳೆಯರು ಮತ್ತು ಮಕ್ಕಳ ಬಿಡುಗಡೆಗೆ ಪ್ರತಿಯಾಗಿ ಬಂಡುಕೋರರ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಬಿಡುಗಡೆ ಮಾಡಿಸಲು ಕತಾರ್‌ನ ಸಂಧಾನಕಾರರು ಹಮಾಸ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಕತಾರ್ ಮತ್ತು ಅಮೆರಿಕದ ನೆರವಿನೊಂದಿಗೆ ಶನಿವಾರ ರಾತ್ರಿಯಿಂದ ನಡೆದಿರುವ ಮಾತುಕತೆಗಳು ಸಕಾರಾತ್ಮಕವಾಗಿವೆ ಎಂದು ಮೂಲಗಳು ತಿಳಿಸಿವೆ. ಇಸ್ರೇಲ್‌ನ ಒತ್ತೆಯಾಳುಗಳೊಂದಿಗೆ ಹಮಾಸ್‌ ಬಂಡುಕೋರರು ಪರಾರಿಯಾದ ಬಳಿಕ ದೋಹಾ ಮತ್ತು ಗಾಜಾದಲ್ಲಿನ ಹಮಾಸ್ ಪ್ರತಿನಿಧಿಗಳ ಜೊತೆ ಕತಾರ್ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಗಾಜಾದಲ್ಲಿ ಇಸ್ರೇಲ್‌ ಒತ್ತೆಯಾಳುಗಳ ಸಂಖ್ಯೆ ಎಷ್ಟು ಎಂಬುದು ಅಸ್ಪಷ್ಟವಾಗಿದೆ. ಹಮಾಸ್ ಬಂಡುಕೋರರು ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಸೈನಿಕರನ್ನು ಒತ್ತೆ ಇರಿಸಿಕೊಂಡಿದೆ ಎಂದು ನಂಬಲಾಗಿದೆ.

ಈ ಹಿಂದೆ ಹಮಾಸ್ ಮತ್ತು ಇಸ್ರೇಲ್‌ನೊಂದಿಗೆ ನಡೆದಿದ್ದ ಮಧ್ಯಸ್ಥಿಕೆ ಪ್ರಯತ್ನಗಳ ಬಗ್ಗೆ ತಿಳಿದಿರುವ ಪ್ಯಾಲೆಸ್ಟೀನ್ ಅಧಿಕಾರಿಯೊಬ್ಬರು, ಕತಾರ್ ಮತ್ತು ಈಜಿಪ್ಟ್ ದೇಶಗಳು ಹಮಾಸ್‌ ಜತೆ ಸಂಪರ್ಕದಲ್ಲಿವೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT