ಕೈರೋ: ಗಾಜಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿಯನ್ನು ಸೀಮಿತ ಸಂಚಾರಕ್ಕಾಗಿ ಸೋಮವಾರ ಮುಕ್ತಗೊಳಿಸಲಾಯಿತು. ಆದರೆ, ಕೆಲ ಪ್ಯಾಲೆಸ್ಟೀನಿಯರಷ್ಟೇ ಗಡಿಯನ್ನು ದಾಟಿದರು.

ಈ ಬೆಳವಣಿಗೆಯು ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಸ್ಥಾಪನೆಗೆ ಪ್ರಮುಖ ಹೆಜ್ಜೆಯಾಗಿರಲಿದೆ.

ಗಡಿ ಭಾಗವನ್ನು ಸೀಮಿತ ಸಂಚಾರಕ್ಕೆ ಮುಕ್ತಗೊಳಿಸಿದ ಮೊದಲ ಒಂದು ಗಂಟೆಯಲ್ಲಿ ಯಾರೂ ಗಡಿದಾಟಲಿಲ್ಲ. ‘ಮೊದಲ ದಿನ 50 ಪ್ಯಾಲೆಸ್ಟೀನಿಯರು ಗಡಿಯನ್ನು ದಾಟಿದ್ದಾರೆ’ಎಂದು ಈಜಿಪ್ಟ್ನ ಅಧಿಕಾರಿಗಳು ತಿಳಿಸಿದ್ದಾರೆ.

‘ವೈದ್ಯಕೀಯ ನೆರವಿನ ಅಗತ್ಯವಿರುವ ಪ್ಯಾಲೆಸ್ಟೀನ್ನ 20 ಸಾವಿರ ಮಕ್ಕಳು ಮತ್ತು ವಯಸ್ಕರು ಗಾಜಾವನ್ನು ತೊರೆಯಲು ಬಯಸುತ್ತಿದ್ದಾರೆ’ ಎಂದು ಗಾಜಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾದಿಂದ ಹೊರಗಿರುವ ಸಾವಿರಾರು ಪ್ಯಾಲೆಸ್ಟೀನಿಯರು ಮರಳಿ ತಮ್ಮ ಮನೆಗಳಿಗೆ ಬರುವ ಸಾಧ್ಯತೆಗಳಿವೆ.

ಬಾಲಕ ಸಾವು: ಗಾಜಾಪಟ್ಟಿಯ ಕರಾವಳಿ ಭಾಗದಲ್ಲಿನ ನಿರಾಶ್ರಿತರ ವಸತಿಪ್ರದೇಶದ ಮೇಲೆ ಇಸ್ರೇಲ್ ಸೋಮವಾರ ನಡೆಸಿದ ದಾಳಿಯಲ್ಲಿ ಮೂರು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.