ವಿಶ್ವದಾದ್ಯಂತ ನಿರಾಶ್ರಿತರಾದವರ ಸಂಖ್ಯೆ 11 ಕೋಟಿಗೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಏಜೆನ್ಸಿ ಯುಎನ್‌ಎಚ್‌ಸಿಆರ್ (UNHCR) ವರದಿ ಹೇಳಿದೆ. ಉಕ್ರೇನ್ ಹಾಗೂ ಸುಡಾನ್ ಸಂಘರ್ಷದಿಂದ ಹಲವು ಮಂದಿ ಅನಿವಾರ್ಯವಾಗಿ ಮನೆ ತೊರೆದಿದ್ದಾರೆ ಎಂದು ಅದು ಹೇಳಿದೆ.
ಕಳೆದ ವರ್ಷದಲ್ಲಿ ಸುಮಾರು 1.9 ಕೋಟಿ ಮಂದಿ ನಿರಾಶ್ರಿತರಾಗಿದ್ದು, ಒಟ್ಟು ನಿರಾಶ್ರಿತರ ಸಂಖ್ಯೆ 10.840 ಕೋಟಿಗೆ ಏರಿತ್ತು. ಇದು ಒದುವರೆಗೆ ಒಂದು ವರ್ಷದ ಅವಧಿಯಲ್ಲಿ ನಿರಾಶ್ರಿತರಾದವರ ಅತೀ ಹೆಚ್ಚಿನ ಪ್ರಮಾಣ.