ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ಡ್ರೋನ್‌ ದಾಳಿ; ಒಂದು ಸಾವು

Published 28 ಮೇ 2023, 13:10 IST
Last Updated 28 ಮೇ 2023, 13:10 IST
ಅಕ್ಷರ ಗಾತ್ರ

ಕೀವ್ : ಉಕ್ರೇನ್‌ನ ರಾಜಧಾನಿ ಕೀವ್ ಅನ್ನು ಗುರಿಯಾಗಿಸಿ ರಷ್ಯಾ ಸೇನೆ ಶನಿವಾರ ಡ್ರೋನ್‌ ದಾಳಿ ನಡೆಸಿದ್ದು, ಒಬ್ಬರು ಸತ್ತಿದ್ದಾರೆ. ಯುದ್ಧ ಆರಂಭವಾದ ಬಳಿಕ ನಡೆದ ದೊಡ್ಡ ಸ್ವರೂಪದ ಡ್ರೋನ್ ದಾಳಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ವಾರ್ಷಿಕೊತ್ಸವ ಆಚರಣೆಗೆ ಕೀವ್‌ ನಗರ ಸಿದ್ಧತೆಯಲ್ಲಿರುವಾಗಲೇ, ಮುನ್ನಾದಿನದಂದು ರಷ್ಯಾ ದಾಳಿ ನಡೆಸಿದೆ. ಇರಾನ್‌ ಅಭಿವೃದ್ಧಿಪಡಿಸಿರುವ ಶಾಹೆದ್‌ ಡ್ರೋನ್‌ ಬಳಸಿ ದಾಳಿ ನಡೆದಿದೆ ಎಂದು ಉಕ್ರೇನ್‌ ಸೇನಾ ಅಧಿಕಾರಿ ಸೆರ‍್ರಿಲ್‌ ಪೊಪ್ಕೊ ಹೇಳಿದ್ದಾರೆ.

ಸುಮಾರು ಐದು ಗಂಟೆ ಕಾಲ ನಿರಂತರವಾಗಿ ದಾಳಿ ನಡೆಯಿತು. ಉಕ್ರೇನ್‌ ಸೇನೆಯು ಪ್ರತಿರೋಧ ತೋರಿದ್ದು ಸುಮಾರು 40 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದೂ ಅವರು ತಿಳಿಸಿದರು.‌

41 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ದಾಳಿಯಿಂದ ಬಹುಮಹಡಿ ಕಟ್ಟಡವೊಂದು ಕುಸಿದಿದ್ದು, ಅವಶೇಷಗಳಡಿ ಸಿಕ್ಕು ಮಹಿಳೆಯೊಬ್ಬರು ಗಾಯಗೊಂಡರು ಎಂದು ಅಧಿಕಾರಿಗಳು ವಿವರಿಸಿದರು. 

ಉಕ್ರೇನ್‌ ವಾಯುಪಡೆ ಅಧಿಕಾರಿಗಳು, ಶನಿವಾರ ರಾತ್ರಿಯೇ ದಾಳಿ ಆರಂಭವಾಗಿದ್ದು, ದೇಶದ ವಿವಿಧೆಡೆ ಸುಮಾರು 54 ‘ಶಾಹೆದ್‌’ ಡ್ರೋನ್‌ ಅನ್ನು ಪ್ರಯೋಗಿಸಲಾಗಿದೆ ಎಂದು ತಿಳಿಸಿದರು.

ಹಾರ್ಕಿವ್ ಪ್ರಾಂತ್ಯದಲ್ಲಿ ನಡೆದ ಎರಡು ಪ್ರತ್ಯೇಕ ಶೆಲ್‌ ದಾಳಿಯಲ್ಲಿ ಮಹಿಳೆಯೊಬ್ಬರು ಸೇರಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಗವರ್ನರ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT