ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ಶಸ್ತ್ರಾಸ್ತ್ರ: ವಿಶ್ವಸಂಸ್ಥೆ ನಿರ್ಣಯದ ವಿರುದ್ಧ ಮತ ಚಲಾಯಿಸಿದ ರಷ್ಯಾ

ಬಾಹ್ಯಾಕಾಶದಲ್ಲಿ ಅಪಾಯಕಾರಿ ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆ ತಡೆಯುವ ವಿಶ್ವಸಂಸ್ಥೆಯ ನಿರ್ಣಯದ ವಿರುದ್ಧವಾಗಿ ರಷ್ಯಾ ಬುಧವಾರ ಮತ ಚಲಾಯಿಸಿದೆ.
Published 22 ಮೇ 2024, 12:50 IST
Last Updated 22 ಮೇ 2024, 12:50 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಬಾಹ್ಯಾಕಾಶದಲ್ಲಿ ಅಪಾಯಕಾರಿ ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆ ತಡೆಯುವ ವಿಶ್ವಸಂಸ್ಥೆಯ ನಿರ್ಣಯದ ವಿರುದ್ಧವಾಗಿ ರಷ್ಯಾ ಬುಧವಾರ ಮತ ಚಲಾಯಿಸಿದೆ.

ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ 13 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಚೀನಾ ಮತದಾನದಿಂದ ದೂರ ಉಳಿದಿತ್ತು. ಆದರೆ ರಷ್ಯಾ, ಬಾಹ್ಯಾಕಾಶದಲ್ಲಿ ಎಲ್ಲಾ ವಿಧದ ಶಸ್ತ್ರಾಸ್ತ್ರ ಬಳಕೆ ನಿಷೇಧಕ್ಕೆ ತನ್ನ ಸಹಮತ ಇಲ್ಲ ಎಂದು ಹೇಳಿತು.

ಮತದಾನದ ನಂತರ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್‌ಫೀಲ್ಡ್‌, ‘ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ಬಾಹ್ಯಾಕಾಶದಲ್ಲಿ ಪರಮಾಣು ಶಸ್ತ್ರಾಸ್ತ್ರ ಇರಿಸುವ ಯಾವುದೇ ಉದ್ದೇಶ ಇಲ್ಲ ಎಂದಿದ್ದಾರೆ. ಆದರೆ ದೇಶದ ವಿಟೊ ಅಧಿಕಾರವು ಅದು ಏನನ್ನೋ ಮುಚ್ಚಿಡಬಹುದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ’ ಎಂದರು.

ಮತದಾನಕ್ಕೂ ಮುನ್ನ ರಷ್ಯಾ ರಾಯಭಾರಿ ವಸ್ಸಿಲಿ ನೆಬೆಂಜಿಯಾ ಅವರು, ‘ನಿರ್ಣಯವು ಅಸಂಬಂಧ ಮತ್ತು ರಾಜಕೀಯ ಪ್ರೇರಿತ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT