ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಉಕ್ರೇನಲ್ಲಿ ರಷ್ಯಾ ಕ್ಷಿಪಣಿ ದಾಳಿ: 11 ಮಂದಿ ಸಾವು

Published 7 ಜನವರಿ 2024, 4:29 IST
Last Updated 7 ಜನವರಿ 2024, 4:29 IST
ಅಕ್ಷರ ಗಾತ್ರ

ಕೀವ್‌: ಪೂರ್ವ ಉಕ್ರೇನ್ ನಗರ ಪೊಕ್ರೊವ್‌ಸ್ಕ್‌ ಹಾಗೂ ಸುತ್ತಮುತ್ತ ಶನಿವಾರ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ 11 ಜನರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಐವರು ಮಕ್ಕಳು ಸೇರಿದ್ದಾರೆ ಎಂದು ಉಕ್ರೇನ್ ನಿಯಂತ್ರಿತ ಡೊನೆಟ್‌ಸ್ಕ್‌ ಪ್ರದೇಶದ ಗವರ್ನರ್ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಉಕ್ರೇನ್‌ನಲ್ಲಿರುವ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ತಡರಾತ್ರಿಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆದಿವೆ. ದಾಳಿ ನಂತರದ ದೃಶ್ಯಗಳನ್ನು ಪ್ರಾದೇಶಿಕ ಗವರ್ನರ್ ವಾಡಿಮ್ ಫಿಲಾಶ್ಕಿನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಶನಿವಾರ ಮಧ್ಯಾಹ್ನ 3ಗಂಟೆಗೆ ರಷ್ಯಾದ ಪಡೆಗಳು ಎಸ್ -300 ಕ್ಷಿಪಣಿಗಳೊಂದಿಗೆ ಪೊಕ್ರೊವ್‌ಸ್ಕ್‌ ಮೇಲೆ ಸಾಮೂಹಿಕ ಶೆಲ್ ದಾಳಿ ನಡೆಸಿವೆ. ದಾಳಿಯಲ್ಲಿ 3ರಿಂದ 17 ವರ್ಷ ವಯಸ್ಸಿನ ಐದು ಮಕ್ಕಳು ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ ಎಂದು ಗವರ್ನರ್ ಫಿಲಾಶ್ಕಿನ್ ಖಚಿತ ಪಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT