ಕೀವ್: ರಷ್ಯಾವು ಉಕ್ರೇನ್ ಮೇಲಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಸೋಮವಾರ ರಾತ್ರಿಯೂ ಮುಂದುವರಿಸಿದ್ದು, ಐವರು ಮೃತಪಟ್ಟಿದ್ದಾರೆ.

‘ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೆ ನಿರಂತರ ದಾಳಿ ನಡೆದಿದ್ದು, 16 ಜನ ಗಾಯಗೊಂಡಿದ್ದಾರೆ. ದಾಳಿಯಿಂದಾಗಿ ಉಕ್ರೇನ್ ರಾಜಧಾನಿ ಕೀವ್‌ನ ಹೊರವಲಯದಲ್ಲಿ ಬೆಂಕಿ ಹತ್ತಿಕೊಂಡಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಕ್ರೀವಿ ರಿಹದಲ್ಲಿರುವ ವಸತಿ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ’ ಎಂದು ನಗರ ಸೇನಾಪಡೆಯ ಮುಖ್ಯಸ್ಥ ಅಲೆಕ್ಸಾಂಡರ್ ವಿಲ್‌ಕುಲ್ ತಿಳಿಸಿದ್ದಾರೆ.

‘ಉಕ್ರೇನ್ ವಾಯುಪಡೆಯು ರಷ್ಯಾದ ಎಲ್ಲ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಆದರೆ ಅದರ ಅವಶೇಷಗಳಿಂದಾಗಿ ಅರಣ್ಯದಲ್ಲಿ ಬೆಂಕಿ ಹತ್ತಿಕೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಮ್ಮ ಇಂಧನ ಮೂಲಸೌಕರ್ಯವನ್ನು ರಷ್ಯಾ ಗುರಿಯಾಗಿಸಿಕೊಂಡಿದೆ. ಮಿತ್ರರಾಷ್ಟ್ರಗಳು ದೀರ್ಘ ವ್ಯಾಪ್ತಿಯ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಮತ್ತು ಅದನ್ನು ರಷ್ಯಾದ ವಿರುದ್ಧ ಬಳಸಲು ಅನುಮತಿ ನೀಡಬೇಕು’ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಸೋಮವಾರ ಒತ್ತಾಯಿಸಿದ್ದಾರೆ.

‘ಉಕ್ರೇನ್ ನಗರದ ಮೇಲಿನ ಭೀಕರ ದಾಳಿಯನ್ನು ನಿಲ್ಲಿಸಬೇಕಾದರೆ ರಷ್ಯಾದ ಕ್ಷಿಪಣಿ ಉಡಾವಣಾ ಸ್ಥಳಗಳನ್ನು ನಾಶಗೊಳಿಸಬೇಕು. ಮಿತ್ರರಾಷ್ಟ್ರಗಳು ಬೆಂಬಲ ನೀಡಿದರೆ ನಾವು ರಷ್ಯಾಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

ಬೈಡನ್ ಭರವಸೆ: ‘ಉಕ್ರೇನ್‌ನ ಇಂಧನ ಮೂಲ ಸೌಕರ್ಯದ ಮೇಲಿನ ದಾಳಿಯನ್ನು ಖಂಡಿಸುತ್ತೇವೆ. ರಕ್ಷಣಾ ಉಪಕರಣಗಳ ರಫ್ತು ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು. ಉಕ್ರೇನ್‌ನ ಇಂಧನ ಮೂಲಸೌಕರ್ಯಗಳ ದುರಸ್ತಿಗೆ ನೆರವು ನೀಡುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭರವಸೆ ನೀಡಿದ್ದಾರೆ.

‘ಉಕ್ರೇನ್‌ನ ರಕ್ಷಣಾ ಕ್ಷೇತ್ರ ಹಾಗೂ ಕೈಗಾರಿಕೆಗಳಿಗೆ ನೆರವಾಗುತ್ತಿರುವ ಇಂಧನ ಮೂಲಸೌಕರ್ಯಕ್ಕೆ ಹಾನಿ ಮಾಡಲು ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಡ್ರೋನ್‌ಗಳನ್ನು ಬಳಸಲಾಯಿತು. ದಾಳಿಯು ಯಶಸ್ವಿಯಾಗಿದೆ’ ಎಂದು ರಷ್ಯಾ ಸೇನಾ ಪಡೆ ತಿಳಿಸಿದೆ.

‘ಕುರ್ಸ್‌ಕ್ ಪ್ರದೇಶದಲ್ಲಿ ಉಕ್ರೇನ್‌ನ ನಾಲ್ಕು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ’ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಪೋಕ್ರೊವ್‌ಸ್ಕ್‌ನಲ್ಲಿ ಪರಿಸ್ಥಿತಿ ಕಠಿಣವಾಗಿದೆ:

‘ರಷ್ಯಾದ ಕುರ್ಸ್‌ಕ್ ಪ್ರದೇಶದಲ್ಲಿ ಉಕ್ರೇನ್ ಪಡೆಗಳು ಪ್ರತಿದಾಳಿಗೆ ಸಜ್ಜಾಗಿವೆ, ಆದರೆ ಪೂರ್ವ ಪೋಕ್ರೊವ್‌ಸ್ಕ್‌ನಲ್ಲಿ ರಷ್ಯಾ ತನ್ನ ಪಡೆಗಳ ನಿಯೋಜನೆಯನ್ನು ಹೆಚ್ಚಿಸುತ್ತಿದೆ’ ಎಂದು ಉಕ್ರೇನ್ ಸೇನೆಯ ಉನ್ನತ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ನಿಶ್ಚಿತ: ಝೆಲೆನ್‌ಸ್ಕಿ

‘81 ಡ್ರೋನ್‌ಗಳು ಸೇರಿದಂತೆ ಹಲವು ಕ್ಷಿಪಣಿಗಳನ್ನು ಬಳಸಿ ಉಕ್ರೇನ್ ಮೇಲೆ ದಾಳಿ ನಡೆಸಲಾಗಿದೆ. ಇದಕ್ಕೆ ನಾವು ಖಂಡಿತವಾಗಿ ಪ್ರತ್ಯುತ್ತರ ನೀಡುತ್ತೇವೆ. ಜನರ ಮೇಲಿನ ದಾಳಿ ಶಿಕ್ಷಾರ್ಹ ಅಪರಾಧ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಮೋದಿ ಶ್ಲಾಘಿಸಿದ ಬೈಡನ್

ವಾಷಿಂಗ್ಟನ್ : ಶಾಂತಿ ಸಂದೇಶ ಸಾರಿ ಉಕ್ರೇನ್‌ಗೆ ಮಾನವೀಯ ಸಹಕಾರವನ್ನು ನೀಡುವುದಾಗಿ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸೋಮವಾರ ಶ್ಲಾಘಿಸಿದ್ದಾರೆ.

ಮೋದಿ ಅವರು ಕೀವ್‌ಗೆ ಭೇಟಿ ನೀಡಿ ಭಾರತಕ್ಕೆ ಮರಳಿದ ಬೆನ್ನಲ್ಲೆ ಸೋಮವಾರ ಕರೆ ಮಾಡಿದ ಬೈಡನ್ ಅವರು ಉಕ್ರೇನ್‌ಗೆ ಐತಿಹಾಸಿಕ ಭೇಟಿ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿ ಸ್ಥಾಪನೆಯ ಪ್ರಯತ್ನಗಳ ಬಗ್ಗೆ ಚರ್ಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.