ಸನಾ: ಸೌದಿ ಅರೇಬಿಯಾ ನೇತೃತ್ವದ ಮಿತ್ರ ಪಡೆಗಳು ಯೆಮೆನ್ ರಾಜಧಾನಿ ಸನಾ ಹಾಗೂ ಕೆಂಪು ಸಮುದ್ರ ದಂಡೆಯ ಹೊದಿಡಾ ನಗರದ ಶನಿವಾರ ವಾಯುದಾಳಿ ನಡೆಸಿದ್ದು,ಕನಿಷ್ಠ 7 ಮಂದಿ ಬಲಿಯಾಗಿದ್ದಾರೆ.
ಇರಾನ್ ಬೆಂಬಲಿತ ಹೂತಿ ಬಂಡುಕೋರರನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ.ಸೌದಿಯ ಜೆಡ್ಡಾ ನಗರದಲ್ಲಿ ತೈಲ ಸಂಗ್ರಹಾಗಾರವೊಂದರ ಮೇಲೆ ಹೂತಿ ಬಂಡುಕೋರರು ದಾಳಿ ನಡೆಸಿದ ಮಾರನೇ ದಿನವೇ ಈ ಪ್ರತೀಕಾರದ ದಾಳಿ ನಡೆದಿದೆ.