ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ಗಡಿ ಭದ್ರತಾ ಪಡೆ ದಾಳಿಯಿಂದ ಇಥಿಯೋಪಿಯಾದ ನೂರಾರು ವಲಸಿಗರು ಸಾವು: ವರದಿ

Published 21 ಆಗಸ್ಟ್ 2023, 5:06 IST
Last Updated 21 ಆಗಸ್ಟ್ 2023, 5:06 IST
ಅಕ್ಷರ ಗಾತ್ರ

ಲಂಡನ್‌: ಯೆಮನ್‌ ಮಾರ್ಗವಾಗಿ ಸೌದಿ ಅರೇಬಿಯಾ ಗಡಿ ದಾಟಲು ಪ್ರಯತ್ನಿಸಿದ ಇಥಿಯೋಪಿಯಾ ವಲಸಿಗರ ಮೇಲೆ ಸೌದಿ ಗಡಿ ಭದ್ರತಾ ಪಡೆ ದಾಳಿ ನಡೆಸಿದ ದಾಳಿಯಲ್ಲಿ, ಕಳೆದ ವರ್ಷದಿಂದ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂಘಟನೆ ಸೋಮವಾರ ಆರೋಪಿಸಿದೆ.

ನ್ಯೂಯಾರ್ಕ್‌ ಮೂಲದ 'ಹ್ಯೂಮನ್‌ ರೈಟ್ಸ್‌ ವಾಚ್‌' (Human Rights Watch) ಎಂಬ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮಾಡಿರುವ ಈ ಆರೊಪದ ಬಗ್ಗೆ ಸೌದಿ ಅರೇಬಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ಸೌದಿ ರಕ್ಷಣಾ ಸಿಬ್ಬಂದಿ ನೂರಾರು ನಿರಾಶ್ರಿತರನ್ನು ಗಡಿ ಪ್ರದೇಶಗಳಲ್ಲಿ ಹತ್ಯೆ ಮಾಡಿದ್ದಾರೆ. ಸೌದಿಯ ಖ್ಯಾತಿಯನ್ನು ಹೆಚ್ಚಿಸುವುದಕ್ಕಾಗಿ ವೃತ್ತಿಪರ ಗಾಲ್ಫ್‌, ಫುಟ್‌ಬಾಲ್‌ ಆಟಗಾರರನ್ನು, ಕ್ಲಬ್‌ಗಳನ್ನು ಖರೀದಿಸಲು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ನೂರಾರು ಕೋಟಿ ಖರ್ಚು ಮಾಡುಲಾಗುತ್ತದೆ. ಆದರೆ, ಆ ಮೂಲಕ ಇಂತಹ ಭಯಾನಕ ಅಪರಾಧಗಳ ಮೇಲಿನ ಗಮನವನ್ನು ತಿರುಗಿಸಬಾರದು' ಎಂದು ಎನ್‌ಜಿಒ ತನ್ನ ವರದಿಯಲ್ಲಿ ಹೇಳಿದೆ.

ಸೌದಿ ಅರೇಬಿಯಾ ಮತ್ತು ಯೆಮನ್‌ನಲ್ಲಿ ಇಥಿಯೋಪಿಯನ್‌ ನಿರಾಶ್ರಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ದಶಕದಿಂದಲೂ ದಾಖಲಿಸುತ್ತಿರುವುದಾಗಿ ಹೇಳಿಕೊಂಡಿರುವ ಎನ್‌ಜಿಒ, ಇತ್ತೀಚಿನ ಹತ್ಯೆ ಕೃತ್ಯಗಳು 'ವ್ಯಾಪಕ ಮತ್ತು ವ್ಯವಸ್ಥಿತ' ಎಂಬಂತೆ ತೋರುತ್ತಿವೆ. ಇದು ಮಾನವೀಯತೆಗೆ ವಿರುದ್ಧವಾದ ಅಪರಾಧಗಳಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ಸೌದಿ ಅರೇಬಿಯಾದ ದಕ್ಷಿಣ ಮತ್ತು ಯೆಮನ್‌ನ ಉತ್ತರ ಗಡಿ ಪ್ರದೇಶದಲ್ಲಿ ಸೌದಿ ರಕ್ಷಣಾ ಪಡೆಗಳು ನಡೆಸಿದ ಶೆಲ್‌ ಹಾಗೂ ಲಘು ಶಸ್ತ್ರಾಸ್ತ್ರ ದಾಳಿಯಿಂದಾಗಿ ಸುಮಾರು 430 ವಲಸಿಗರು ಮೃತಪಟ್ಟಿದ್ದಾರೆ ಎಂದು ಕಳೆದ ವರ್ಷ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT