ದುಬೈ: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಅಂಗರಕ್ಷಕ ಮೇಜರ್ ಜನರಲ್ ಅಬ್ದುಲ್ ಅಜೀಜ್ ಅಲ್–ಫಾಗಂ ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಅಲ್ಲಿನ ಸ್ಥಳೀಯ ವಾಹಿನಿಯೊಂದು ಭಾನುವಾರ ವರದಿ ಮಾಡಿದೆ.

ಸೌದಿ ದೊರೆ ಸಲ್ಮಾನ್ ಅವರಿಗೆ ಅಂಗರಕ್ಷಕ ಅಬ್ದುಲ್ ಬೂಟಿನ ಲೇಸು ಕಟ್ಟುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಅಬ್ದುಲ್ ಹತ್ಯೆಯ ಕುರಿತು ವಿವರಗಳು ಇನ್ನೂ ಅಸ್ಪಷ್ಟವಾಗಿದ್ದು, ಅವರ ಹತ್ಯೆಗೆ ಸಂತಾಪ ಸೂಚಿಸಿ ಸೌದಿ ವಾಹಿನಿಯೊಂದು ಟ್ವೀಟ್ ಪ್ರಕಟಿಸಿದಾಗ ವಿಷಯ ತಿಳಿದುಬಂದಿದೆ. ‘ಎರಡು ಮಸೀದಿಗಳ ಉಸ್ತುವಾರಿ ಹಾಗೂ ದೊರೆಯ ಅಂಗರಕ್ಷಕರಾಗಿದ್ದ ಮೇ. ಜ. ಅಬ್ದುಲ್ ಅಜೀಜ್ ಅಲ್ ಫಾಗಂ ಅವರು ಜೆಡ್ಡಾದಲ್ಲಿ ನಡೆದ ವೈಯಕ್ತಿಕ ಜಗಳವೊಂದರಲ್ಲಿ ಗುಂಡೇಟಿನಿಂದ ಹತ್ಯೆಗೀಡಾಗಿದ್ದಾರೆ’ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.

ಅಬ್ದುಲ್ ಅವರ ಸ್ನೇಹಿತನೊಬ್ಬನು ಗುಂಡು ಹಾರಿಸಿ, ಅಬ್ದುಲ್ನನ್ನು ಹತ್ಯೆ ಮಾಡಿ, ಮತ್ತಿಬ್ಬರನ್ನು ಗಾಯಗೊಳಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಶೂಟರ್ನನ್ನು ಭದ್ರತಾ ಪಡೆಗಳು ಕೊಂದು ಹಾಕಿದ್ದು, ಘಟನೆಯಲ್ಲಿ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸೌದಿ ಅರೇಬಿಯಾದಲ್ಲಿ ಶೂಟೌಟ್ ಮತ್ತು ಗನ್ ಮೂಲಕ ನಡೆಯುವ ಅಪರಾಧಗಳು ಅಪರೂಪದ ವಿದ್ಯಮಾನವಾಗಿದ್ದು, ಕೊಲೆಗಾರರು ಮತ್ತು ಮಾದಕವಸ್ತು ಕಳ್ಳ ಸಾಗಾಣಿಕೆದಾರರನ್ನು ಇಸ್ಲಾಮಿನ ಕಠಿಣ ಕಾನೂನಿನ್ವಯ ಗಲ್ಲಿಗೇರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.